HEALTH TIPS

ಕೇರಳ ರಾಜ್ಯ 7ನೇ ಕನ್ನಡ ಸಮ್ಮೇಳನ ಸಮಾರೋಪ-ಭಾಷೆ ಮತ್ತು ಸಂಸ್ಕøತಿಯನ್ನು ಕಟ್ಟಿಕೊಡುವುದು ಸಾಹಿತ್ಯ : ಒಡಿಯೂರು ಶ್ರೀ

 
        ಕಾಸರಗೋಡು: ಸಮಾಜವನ್ನು ಸುಧಾರಿಸುವಲ್ಲಿ ಮತ್ತು ಜೀವನದ ಉಜ್ಜೀವನದಲ್ಲಿ ಸಾಹಿತ್ಯದ ಪಾತ್ರ ದೊಡ್ಡದು. ಭಾಷೆ ಮತ್ತು ಸಂಸ್ಕøತಿಯನ್ನು ಕಟ್ಟಿಕೊಡುವುದು ಸಾಹಿತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಆಯೋಜಿಸಿದ 7 ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
            ಇಂದು ಭಾಷೆಗೆ `ಕಸಿ' ಕಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ ಆ ಮೂಲಕ ಭಾಷೆಗೆ ಧಕ್ಕೆಯಾಗಬಾರದು ಎಂದ ಸ್ವಾಮೀಜಿಯವರು ನೃತ್ಯ, ಕಲೆ, ಸಾಹಿತ್ಯ, ಸಂಸ್ಕøತಿಗಳು ದೇಶದ ಸಂಪತ್ತು. ಇದನ್ನು ಉಳಿಸಿ ಬೆಳೆಸಲು ಇಂತಹ ಸಮ್ಮೇಳನಗಳು ಆಗಾಗ ನಡೆಯುತ್ತಿರಬೇಕು. ಬದುಕು ಚಲನಶೀಲವಾಗಿದ್ದು, ಈ ಬದುಕನ್ನು ತೊರೆಯಂತೆ ಮಾಡುವುದು ಸಾಹಿತ್ಯ. ಭಾಷೆಯ ಶುದ್ಧತೆಯನ್ನು ಯಕ್ಷಗಾನದಲ್ಲಿ ಕಾಣಬಹುದು. ಸಾಹಿತ್ಯ ಜನರನ್ನು ಸುಸಂಸ್ಕøತರನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
     ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷ ಹಿರಿಯ ಚಲನಚಿತ್ರ ಪತ್ರಕರ್ತ ಗಣೇಶ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಕಾಸರಗೋಡಿನಲ್ಲಿ ನಿರಂತರವಾಗಿ ಕನ್ನಡ ಚಟುವಟಿಕೆಗಳು ನಡೆಯಬೇಕು. ಈ ಮೂಲಕ ಕನ್ನಡದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು. ಕನ್ನಡ ಭಾಷೆ, ಸಾಹಿತ್ಯದ ಮಹತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕೆಂದರು.
       ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ರಾಂ ಪ್ರಸಾದ್, ಬಿ.ಇ.ಎಂ. ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾಜೇಶ್ಚಂದ್ರ ಕೆ.ಪಿ, ಕಾಂಞಂಗಾಡ್ ಟ್ರಾಫಿಕ್ ಎಸ್.ಐ. ಪರಮೇಶ್ವರ ನಾಯ್ಕ್ ಬಿ, ಕುಂಪಲ ರಾಮರಾಜ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೊಪ್ಪಲು, ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಕಲಾಸಂಘದ ಅಧ್ಯಕ್ಷ ವೆಂಕಟ್ರಮಣ ಹೊಳ್ಳ, ಕಾಸರಗೋಡು ನಗರಸಭಾ ಕೌನ್ಸಿಲರ್ ಶಂಕರ್ ಕೆ, ಸತೀಶ್ ಕೂಡ್ಲು, ಖ್ಯಾತ ಚಿತ್ರಕಲಾವಿದ ಜಿ.ಎಂ.ಹೆಗಡೆ ಶಿರಸಿ, ಚಂದ್ರನ್ ನಾಯರ್, ಹರಿದಾಸ ಜಯಾನಂದ ಕುಮಾರ್, ಲವ ಕೆ.ಮೀಪುಗುರಿ, ಕೆ.ಗಣೇಶ್ ನಾೈಕ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
      ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಭಾವಗಾನ ಸಂಗಮ, ನೀನಾರಂಗ ನಟ ಸಾಂಸ್ಕøತಿಕ ಸಂಸ್ಥೆ ಹುಬ್ಬಳ್ಳಿ -ಧಾರವಾಡ ಮತ್ತು ಪದನ್ಯಾಸ ಬೆಂಗಳೂರು ಅವರಿಂದ ಜಾನಪದ ಹಾಗು ಭರತನಾಟ್ಯ, ವಿ.ಕೆ.ಎಂ. ಕಲಾವಿದರಿಂದ `ದಿವ್ಯದರ್ಶನ' ನಾಟಕ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries