ಮಂಜೇಶ್ವರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಫೆ.7 ರಂದು ಶುಕ್ರವಾರ ರಾತ್ರಿ 7ರಿಂದ ಮೀಯಪದವು ಶಾಲಾ ಮೈದಾನದಲ್ಲಿ ಯಕ್ಷಗಾನ ಬಯಲಾಟ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಜರಗಲಿದೆ.
ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮೀಂಜ ಒಕ್ಕೂಟ-ಪೈವಳಿಕೆ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪೈವಳಿಕೆ ವಲಯ, ನವಜೀವನ ಸಮಿತಿ ಕಾಸರಗೋಡು ಜಿಲ್ಲೆ ಇವರ ಸೇವಾರೂಪವಾಗಿ ಊರ ಹತ್ತು ಸಮಸ್ತರ ಸಹಾಯ ಸಹಕಾರದೊಂದಿಗೆ ಬಯಲಾಟ ಆಯೋಜಿಸಲಾಗಿದೆ.