ಬದಿಯಡ್ಕ: ಕಾಸರಗೋಡು ಎಜುಕೇಷನ್ ಆಂಡ್ ಕೆರಿಯರ್ ಗೈಡ್‍ಲೈನ್ಸ್ ಬದಿಯಡ್ಕ ಇದರ ಆಶ್ರಯದಲ್ಲಿ ಪ್ಲಸ್ ಟು ವಿದ್ಯಾರ್ಥಿಗಳಿಗಾಗಿ
"ಭವಿಷ್ಯದ ಬಾಂಧವ್ಯ" ಎಂಬ ಧ್ಯೇಯ ವಾಕ್ಯದಲ್ಲಿ ಏಕ ದಿನ ವ್ಯಕ್ತಿತ್ವ ವಿಕಸನ ಕಾರ್ಯಗಾರ ಫೆ.8ಕ್ಕೆ ಬದಿಯಡ್ಕದ ಗುರು ಸದನದಲ್ಲಿ ಜರಗಲಿದೆ.
ಶಿಕ್ಷಣ ತಜ್ಞ ಡಾ.ಕುರಿಯನ್, ಡಾ.ನಿಶಮ್ ಆಹಮ್ಮದ್, ಡಾ.ದಿಲೀಪ್ ಕುಮಾರ್.ಕೆ, ಡಾ.ಮಧುಮಾಲ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಕಾರ್ಯಗಾರ ಸಂಪೂರ್ಣ ಉಚಿತವಾಗಿದ್ದು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಶಿಕ್ಷಣಕ್ಕೆ ಪೂರಕವಾಗಿ ನೈತಿಕ ಮೌಲ್ಯಗಳ ಸಲಹೆ, ಸೂಚನೆ ಅಲ್ಲದೆ ಭವಿಷ್ಯದ ಶಿಕ್ಷಣ ಅಥವ ಉದ್ಯೋಗಕ್ಕೆ ಅನುಕೂಲಕರವಾದ ಮಾರ್ಗದರ್ಶನವನ್ನು ಹಾಗೂ ಪ್ಲಸ್ ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾನಿಲಯದ ಮಟ್ಟದ ಸಂಪನ್ಮೂಲ ವಿದ್ವಾಂಸರಿಂದ ಪರೀಕ್ಷೆಯನ್ನು ಎದುರಿಸುವ ಸುಲಲಿತ ಸೂತ್ರದ ಜೊತೆಗೆ ವ್ಯಕ್ತಿತ್ವ ವಿಕಸನದ ಜೀವನ ಕಲೆ ಹಾಗೂ ಉದ್ಯೋಗ ಸಾಧ್ಯತೆಯ ಪದವಿ ಶಿಕ್ಷಣದ ಪರಿಚಯವನ್ನು ನೀಡಲು ಈ ಶಿಬಿರವನ್ನು ಆಯೋಜಿಸಲಾಗಿದ್ದು ಕಾಸರಗೋಡು ಜಿಲ್ಲೆಯ ಪ್ಲಸ್ ಟು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.