ಮಂಜೇಶ್ವರ : ಮೀಟಿಂಗ್ ಪಾಯಿಂಟ್ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ 8 ನೇ ವಾರ್ಷಿಕೋತ್ಸವ ಹಾಗೂ ಫಲಾನುಭವಿಗಳಿಗೆ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ ಮತ್ತು ಬಹು ಭಾಷಾ ಕವಿ ಗೋಷ್ಠಿ ಇಂದು ( ಫೆಬ್ರುವರಿ 24 ಸೋಮವಾರ ) ಬೆಳಿಗ್ಗೆ 10. 30 ರಿಂದ ವರ್ಕಾಡಿ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾ ಶ್ರಮದಲ್ಲಿ ನಡೆಯಲಿದೆ.
ಉದ್ಯಮಿ ಅಬ್ದುಲ್ ಲತೀಫ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ. ಎಂ ಅಶ್ರಫ್, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಿ. ಎ, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಲೇಖಕ ಇಸ್ಮತ್ ಫಜೀರ್, ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಕೃಷ್ಣ ಪಜ್ವ, ಬ್ಲಾಕ್ ಪಂಚಾಯತ್ ಸದಸ್ಯ ಸದಾಶಿವ ಯು, ಸಯ್ಯಿದ್ ಶಂಸುದ್ದೀನ್ ತಂಘಳ್, ರೆ. ಫಾದರ್ ಫ್ರಾಂಸಿಸ್ ರಾಡ್ರಿಗಸ್, ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬೋಲ್ನ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪದ್ಮಶ್ರೀ ಹರೇಕಳ ಹಾಜಬ್ಬ, ಹಾಗೂ ಡಾ. ಉದಯ ಕುಮಾರ್ ನೂಜಿ, ಶ್ರೀಮತಿ ಡಾ. ಶಾರದಾ ಉದಯ ಕುಮಾರ್, ಇಬ್ರಾಹಿಂ ಹಾಜಿ ಕಲ್ಲೂರು ಇವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಮಾರಂಭದಲ್ಲಿ ಸಿನಿಮಾ ನಟಿ ರೂಪಾಶ್ರೀ ವರ್ಕಾಡಿ, ಪೆÇಯ್ಯತ್ತಬೈಲು ಜುಮಾ ಮಸೀದಿ ಅಧ್ಯಕ್ಷ ಡಿ. ಎಂ. ಕೆ ಮೊಹಮ್ಮದ್, ಜುಬೈರ್ ಸಅದಿ ಬೋರ್ಕಳ, ಮಂಜೇಶ್ವರ ಪ್ರೆಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಮಚ್ಚoಪಾಡಿ, ದಿವಾಕರ್. ಎಸ್. ಜೆ, ಮೋಹನ ಮಾಸ್ಟರ್, ಬಿ. ಮೊಹಮ್ಮದ್ ಕುಞ, ಜಗನ್ನಾಥ ಶೆಟ್ಟಿ, ವಿವೇಕ್ ಆದಿತ್ಯ, ಪಿ. ಮೋನು ಬೋರ್ಕಳ, ಶಾಹುಲ್ ಹಮೀದ್, ಪಿ. ಸೋಮಪ್ಪ, ಅಬೂ ತಮಾಂ ಉಪ್ಪಳ, ರವಿ.ಎಂ.ಎಸ್ ವರ್ಕಾಡಿ, ಯೋಗೀಶ್.ಎ.ಎನ್ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 12ರಿಂದ ಬಹು ಭಾಷಾ ಕವಿ ಗೋಷ್ಠಿ ನಡೆಯಲಿದೆ. ಜಲೀಲ್ ಮುಕ್ರಿ ಅಧ್ಯಕ್ಷತೆ ವಹಿಸುವರು. ಯಂಶ ಬೇಂಗಿಲ, ಸಾಹುಕಾರ್ ಅಚ್ಚು, ಲುಕ್ಮಾನ್ ಅಡ್ಯಾರ್, ದಯಾನಂದ ರೈ ಕುಕ್ಕಾಜೆ, ಜುನೈದ್ ಕೊಡಗು, ಕುಮಾರಿ ಅನುಷಾ ಸುಬ್ರಹ್ಮಣ್ಯ, ಕುಮಾರಿ ಅಪೂರ್ವ ಕಾರಂತ್, ನವೀನ್ ಪೆರೇರಾ ಸುರತ್ಕಲ್, ವಿಲ್ಸನ್ ಕಟೀಲ್, ಪ್ರಣವ್ ಭಟ್, ಕುಮಾರಿ ಮಲ್ಲಿಕಾ ಜೆ. ರೈ ಗುಂಡ್ಯಡ್ಕ, ಇಬ್ರಾಹಿಂ ಖಲೀಲ್ ಪುತ್ತೂರು ಕವಿ ಗೋಷ್ಠಿಯಲ್ಲಿ ಭಾಗವಹಿಸುವರು.