ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಫೆ.9ರಂದು ಮುಳ್ಳೇರಿಯ ಸಮೀಪದ ಆಲಂತಡ್ಕ ಬಾಲಕೃಷ್ಣ ಕೇಕುಣ್ಣಾಯರ ಮನೆಯಲ್ಲಿ ಬೆಳಗ್ಗೆ 10ರಿಂದ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ವೆಂಕಟಕೃಷ್ಣ ಕಾರಂತ ವಹಿಸುವರು. ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ ಸಹಿತ ಅನೇಕ ಮಂದಿ ಸಮುದಾಯ ಸದಸ್ಯರು ಭಾಗವಹಿಸುವರು. ಈ ಸಂದರ್ಭದಲ್ಲಿ ವಿವಿಧ ಗಿಡಗಳಿಗೆ ಕಸಿ ಕಟ್ಟುವ ವಿಧಾನಗಳ ಕುರಿತು ಪ್ರಯೋಗಾತ್ಮಕವಾದ ಪ್ರಾತ್ಯಕ್ಷಿಕೆಯನ್ನು ಆಲಂತಡ್ಕ ಲಕ್ಷ್ಮೀಶ ಕೇಕುಣ್ಣಾಯರು ನೀಡಲಿದ್ದಾರೆ. ಶಿವಳ್ಳಿ ಬ್ರಾಹ್ಮಣ ಸಮುದಾಯದ ಮಹಿಳಾ ಸದಸ್ಯೆಯರಿಗಾಗಿ ಬಟ್ಟೆ ಕೈಚೀಲಗಳನ್ನು ನಿರ್ಮಿಸಲು ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದು, ಈ ಸಭೆಯಲ್ಲಿ ಸಂಗ್ರಹಿತ ಬಟ್ಟೆ ಕೈ ಚೀಲಗಳನ್ನು ಸ್ವೀಕರಿಸಿ, ಸೂಕ್ತ ಮಾರುಕಟ್ಟೆ ಸೃಷ್ಟಿಸುವ ಕುರಿತು ವಿಮರ್ಶೆ ನಡೆಸಲಾಗುವುದು. 2020ರ ಮಾರ್ಚ 8ರಂದು ಬೆಳಗ್ಗೆ 8.30ರಿಂದ ಆದೂರು ಮಲ್ಲಾವರ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯದ ಆಶ್ರಯದಲ್ಲಿ ನಡೆಯುವ ಧನ್ವಂತರಿ ಹೋಮದ ಯಶಸ್ವಿಗಾಗಿ ಸಭೆಯಲ್ಲಿ ಅವಲೋಕನ ನಡೆಯಲಿದೆ. ಶಿವಳ್ಳಿ ಸಮುದಾಯದ ಸದಸ್ಯರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.