ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಸಂವಾಹಕ ಸಮೂಹ ಕಾಸರಗೋಡು ಇದರ ನೇತೃತ್ವದಲ್ಲಿ ಫೆ.9ಕ್ಕೆ "ವಿಶ್ವದರ್ಶನ -2020" ತೃತೀಯ ಸಾಹಿತ್ಯ, ಸಾಂಸ್ಕøತಿಕ ಸಮ್ಮೇಳನ ಜರಗಲಿದೆ.
ಖ್ಯಾತ ಸುಗಮ ಸಂಗೀತ ಕಲಾವಿದ ಬಿ.ಪಿ.ಗೋಪಾಲಕೃಷ್ಣ ಆಚಾರ್ಯ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಹೊಸಂಗಡಿಯ ಅಯ್ಯಪ್ಪ ಕ್ಷೇತ್ರ ಸಮೀಪದ ನಿತ್ಯಾನಂದ ಜ್ಞಾನ ಮಂದಿರದ ಆರ್.ಬಿ.ಸಭಾಂಗಣದಲ್ಲಿ ಜರಗುವ ಸಮ್ಮೇಳನದಲ್ಲಿ ಪುರಸ್ಕಾರ ಪ್ರದಾನ,ಪುಸ್ತಕ ಬಿಡುಗಡೆ, ಕವಿಗೋಷ್ಠಿ,ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವಸ್ತು, ಕರಕುಶಲ ಪ್ರದರ್ಶನ ನಡೆಯಲಿದೆ.
ಬೆಳಿಗ್ಗೆ 9 ಕ್ಕೆ ಸಂಗೀತ ದರ್ಶನ ಬಳಗದವರಿಂದ ಭಕ್ತಿಗಾನ ಸಂಕೀರ್ತನೆ, ಬಳಿಕ 10 ಕ್ಕೆ ಜರಗುವ ಸಮ್ಮೇಳನದ ಸಭಾ ಕಾರ್ಯಕ್ರಮದಲ್ಲಿ ಪುರೋಹಿತ ಶ್ರೀನಿವಾಸ ಆಚಾರ್ಯ ರಾಮತ್ತಮಜಲ್ ದೀಪ ಪ್ರಜ್ವಲನೆಗೈಯ್ಯುವರು. ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶೌತ್ರಿ, ಹೊಸಂಗಡಿ ಅಯ್ಯಪ್ಪ ಕ್ಷೇತ್ರದ ಪ್ರಧಾನ ಅರ್ಚಕ ತಿರುಮಲೇಶ ಆಚಾರ್ಯ ಉಪಸ್ಥಿತರಿರುವರು. ಹಿರಿಯ ಸಾಹಿತಿ ಹರೀಶ್ ಆಚಾರ್ಯ ಕುಂಬಳೆ, ನವೀನ ಆಚಾರ್ಯ ಬೆಂಗಳೂರು, ಕೆ.ಪಿ.ಆನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ "ವಿಶ್ವಪ್ರಭಾ" ಎಂಬ ಪುಸ್ತಕ ಬಿಡುಗಡೆ ಹಾಗೂ ಎಸ್ಸಸ್ಸೆಲ್ಸಿಯಲ್ಲಿ ಉನ್ನತ ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ "ವಿದ್ಯಾ ರತ್ನ ಪುರಸ್ಕಾರ" ಪ್ರದಾನಗೈಯಲಾಗುತ್ತದೆ. ಬಳಿಕ 11.30ರಿಂದ ಜರಗುವ ಕವಿಗೋಷ್ಠಿಯಲ್ಲಿ ಆಶೋಕ್ ಎನ್.ಕಡೇಶಿವಾಲಯ ಅಧ್ಯಕ್ಷತೆ ವಹಿಸುವರು. ಕವಿ,ನಾಟಕಕಾರ ಉಮೇಶ್ ಉಡುಪಿ ಉದ್ಘಾಟಿಸುವರು. ಬಳಿಕ ವಿವಿಧ ಕವಿಗಳಿಂದ ಕವನ ವಾಚನ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ 12.30 ರಿಂದ ವಿಶ್ವಗಾನ ಮಂಜರಿ ತಂಡದವರಿಂದ ರಸಮಂಜರಿ, ವೈವಿಧ್ಯಮಯ ನೃತ್ಯ ಪ್ರದರ್ಶನಗೊಳ್ಳಲಿದೆ. ಸಂಜೆ 4 ಕ್ಕೆ ಜರಗುವ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಗೋಪಾಲಕೃಷ್ಣ ಆಚಾರ್ಯರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ವೇದ ಪ್ರವೀಣ ಪುರಸ್ಕೃತ ತಂತ್ರಿವರ್ಯ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ ಪ್ರಧಾನ ಭಾಷಣಗೈಯ್ಯುವರು. ಈ ಸಂದರ್ಭದಲ್ಲಿ ಶಂಕರ ಆಚಾರ್ಯ ಕೋಟೆಕ್ಕಾರ್, ಆಶೋಕ್ ಆಚಾರ್ಯ ಉದ್ಯಾವರ, ಶೋಭಾ ವಿಶ್ವನಾಥ ಆಚಾರ್ಯ ಬಂದ್ಯೋಡು, ಮೌನೇಶ್ ಆಚಾರ್ಯ ಪುತ್ತಿಗೆ ಇವರಿಗೆ ಸಮಾಜ ಸೇವಾರತ್ನ ಪುರಸ್ಕಾರ ಪ್ರದಾನ ನಡೆಯುವುದು. ಸಭೆಯಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನದ ಸ್ಥಾಪಕ ಜಯ ಮಣಿಯಂಪಾರೆ, ನಿರಂಜನ ಆಚಾರ್ಯ ನೀರ್ಚಾಲು, ಕಿರಣ್ ಶರ್ಮ, ಕಾಂಚನ ಆಚಾರ್ಯ ಕೋಟೆಕ್ಕಾರ್ ಮೊದಲಾದವರು ಉಪಸ್ಥಿತರಿರುವರು.