ಉಪ್ಪಳ: ವೇದಶ್ರೀ ಕಾಳಿಕಾಂಬ ಮಠ ಚಿತ್ರಮೂಲ, ಬಾಯಾರು ಇಲ್ಲಿ ಫೆ. 9ರಿಂದ 14 ರ ವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ವೇದಮೂರ್ತಿ ಬಿಜಿ ತಿರುಮೇನಿ, ಕಾಶಿಮಠ ತಿರುವಾಂಕೂರು(ಮೇಲ್ಶಾಂತಿ ಶ್ರೀ ಕ್ಷೇತ್ರ ಶಬರಿಮಲೆ) ತಂತ್ರಿಗಳ ಆಚಾರ್ಯತ್ವದಲ್ಲಿ ನಡೆಯಲಿರುವುದು.
ಫೆ. 13 ರಂದು ಗುರುವಾರ ಬೆಳಿಗ್ಗೆ 8.31 ರಿಂದ 9.25 ರ ಸುಮುಹೂರ್ತದಲ್ಲಿ ಶ್ರೀ ಕಾಳಿಕಾಂಬೆ ಹಾಗೂ ಪರಿವಾರ ದೇವರ ಪ್ರತಿಷ್ಠಾ ಕಾರ್ಯಕ್ರಮ ಜರಗಲಿರುವುದು. 9ರಂದು ಸಂಜೆ 4 ಕ್ಕೆ ಬ್ರಹ್ಮಶ್ರೀ ವೇದಮೂರ್ತಿ ಬಿಜಿ ತಿರುಮೇನಿ ತಂತ್ರಿಗಳ ಆಗಮನ, ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ನಂತರ 5 ಗಂಟೆಗೆ ಉಗ್ರಾಣ ಮುಹೂರ್ತ ದೇವತಾ ಪ್ರಾರ್ಥನೆ ,ಆಚಾರ್ಯವರಣ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ಅಂಕುರಾರೋಪಣ, ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ,ಪ್ರಾಯಶ್ಚಿತ್ತ ಶಾಂತಿ ಹೋಮ ಮೊದಲಾದ ಕಾರ್ಯಕ್ರಮ ನಡೆಯಲಿದೆ.
ಪೆ. 10 ರಂದು ಬೆಳಿಗ್ಗೆ 6 ರಿಂದ ಆವಾಹಿತ ದೇವತಾ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಶಾಂತಿ ಹೋಮಗಳು ನಡೆಯಲಿದೆ. ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೀಪಾರಾಧನೆ, 7.30 ಕ್ಕೆ ಆವಾಹಿತ ದೇವತಾ ಪೂಜೆ ನಡೆಯಲಿದೆ. ಫೆ. 11 ರಂದು ಬೆಳಿಗ್ಗೆ ಗಂಟೆ 6 ರಿಂದ ಆವಾಹಿತ ದೇವತಾ ಪೂಜೆ, ಅಷ್ಟೋತ್ತರ ಶತ ನಾಳಿಕೇರ ಮಹಾಗಣಪತಿ ಹೋಮ,ಪೂರ್ಣಾಹುತಿ,ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೀಪಾರಾಧನೆ, 7.30 ಕ್ಕೆ ಆವಾಹಿತ ದೇವತಾ ಪೂಜೆ ನಡೆಯಲಿದೆ. ಫೆ. 12ರಂದು ಬೆಳಿಗ್ಗೆ 6 ರಿಂದ ಗಣಪತಿ ಹೋಮ,ಆವಾಹಿತ ದೇವತಾ ಪೂಜೆ,ಮಂಟಪ ಸಂಸ್ಕಾರ,ಕುಂಬೇಶ ಕರ್ಕರಿ ಪೂಜೆ, ಜಲಾಧಿವಾಸ, ಶೈಯಾಧಿವಾಸ, ಧ್ಯಾನಾಧಿವಾಸ,ಅಧಿವಾಸ ಹೋಮ, ಬ್ರಹ್ಮಕಲಶ ಮಂಡಲ ರಚನೆ, ಮಂಡಲ ಪೂಜೆ, ಕಲಶ ಪ್ರತಿಷ್ಠೆ, ಕಲಶ ಪೂಜೆ ನಡೆಯಲಿದ್ದು, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೀಪಾರಾಧನೆ, 7.30 ಕ್ಕೆ ಆವಾಹಿತ ದೇವತಾ ಪೂಜೆ ನಡೆಯಲಿದೆ. ಫೆ. 13 ರಂದು ಬೆಳಿಗ್ಗೆ 6 ರಿಂದ ಆವಾಹಿತ ದೇವತಾ ಪೂಜೆ,ಗಣಪತಿ ಹೋಮ, ನಂತರ ಬ್ರಹ್ಮಶ್ರೀ ವೇದಮೂರ್ತಿ ಬಿಜಿ ತಿರುಮೇನಿ, ತಂತ್ರಿಗಳ ಆಚಾರ್ಯತ್ವದಲ್ಲಿ ಬೆಳಿಗ್ಗೆ 8.31 ರಿಂದ 9.25 ರ ಸುಮುಹೂರ್ತದಲ್ಲಿ ಶ್ರೀ ಕಾಳಿಕಾಂಬೆ, ಶ್ರೀ ಮಹಾಗಣಪತಿ, ಶ್ರೀ ಆಂಜನೇಯ, ಹಾಗೂ ನಾಗರಾಜ ನಾಗಕನ್ನಿಕೆ ದೇವರುಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ನಂತರ ಮಹಾಪೂಜೆ ಹಾಗೂ ನಿತ್ಯ ನೈಮಿತ್ತಿಕ ನಿರ್ಣಯಗಳು ನಡೆಯಲಿದೆ. ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೀಪಾರಾಧನೆ, ರಾತ್ರಿ 8.30 ಕ್ಕೆ ಮಹಾಪೂಜೆ ನಡೆಯಲಿದೆ. ಫೆ. 14 ರಂದು ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, ತ್ರಿಕಾಲ ಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಬ್ರಾಹ್ಮಣ ಸಂಭಾವನೆ, ಮಂತ್ರಾಕ್ಷತೆ, ಸಂಪೆÇ್ರೀಕ್ಷಣೆ ನಡೆಯಲಿದೆ. ಸಂಜೆ 6.30 ಕ್ಕೆ ದೀಪಾರಾಧನೆ, ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ ನಂತರ ಭಜನಾ ಮಂಗಲೋತ್ಸವ ನಡೆಯಲಿದೆ.ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರತಿದಿನವೂ ಧಾರ್ಮಿಕ ಸಭೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳಲ್ಲೂ ಭಗವದ್ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವೇದಶ್ರೀ ಕಾಳಿಕಾಂಬ ಮಠ, ಚಿತ್ರಮೂಲ, ಬಾಯಾರು, ಇದರ ವತಿಯಿಂದ ವಿನಂತಿಸಲಾಗಿದೆ.