ಉಪ್ಪಳ: ವಿಶೇಷ ಹೈನುಗಾರಿಕೆ ಮಾಹಿತಿ ಶಿಬಿರವು ಫೆ.9 ರಂದು ಭಾನುವಾರ ಗೋದ್ರೇಜ್ ಫೀಡ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಿತರಕರಾದ ನಾಯಕ್ ಟ್ರೇಡಿಂಗ್ ಕಂಪೆನಿ ಬಾಯಾರು, ಇದರ ಸಹಭಾಗಿತ್ವದಲ್ಲಿ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ 10.30 ಕ್ಕೆ ಆರಂಭಗೋಡು ಮಧ್ಯಾಹ್ನ 1.ರವರೆಗೆ ನಡೆಯಲಿದ್ದು ಶಿಬಿರದಲ್ಲಿ ಲಾಭದಾಯಕ ಆಧುನಿಕ ಹೈನುಗಾರಿಕೆ ಬಗ್ಗೆ ಮಾಹಿತಿ ಹಾಗೂ ತರಬೇತಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾರುಕಟ್ಟೆ ನಿರ್ದೇಶಕ ಬಸವನ ಗೌಡ ಎಂ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಪೈವಳಿಕೆ ಲಾಲ್‍ಬಾಗ್ ನ ಸರ್ಕಾರಿ ಪಶು ವೈದ್ಯಕೀಯ ಕೇಂದ್ರದ ಡಾ. ಐಶ್ವರ್ಯ ಜೆ ಉಪಸ್ಥಿತರಿರುವರು. ಪದ್ಮನಾಭ ನಾಯಕ್, ಪ್ರಗತಿಪರ ಕೃಷಿಕ ರಾಮಕೃಷ್ಣ ಭಟ್ ಪೆಲತ್ತಡ್ಕ, ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಹೈನುಗಾರರಾದ ಪುಷ್ಪ ಕೊಮ್ಮಂಗಳ, ರಾಮಚಂದ್ರ ಭಟ್ ಉಳುವಾನ ಮೊದಲಾದವರು ಉಪಸ್ಥಿತರಿರುವರು. ಹೈನುಕಾರಿಕೆಯಲ್ಲಿ ಆಸಕ್ತಿಯಿರುವ ಎಲ್ಲಾ ಕೃಷಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ.