HEALTH TIPS

ಗಡಿನಾಡಿನ ಪತ್ರಕರ್ತರಲ್ಲಿ ಸಮಕಾಲೀನ ತಲ್ಲಣಗಳಿವೆ-ರಾಧಾಕೃಷ್ಣ ಕೆ.ಉಳಿಯತ್ತಡ್ಕ

         ಕಾಸರಗೋಡು: ಗಡಿನಾಡಿನ ಪತ್ರಿಕೋದ್ಯಮ ಇಲ್ಲಿಯ ಕನ್ನಡ ಹೋರಾಟದ ಧ್ವನಿಯಾಗಿ ಸಮಾಜವನ್ನು ಮುನ್ನಡೆಸಿದೆ.ಆದರೆ ಪತ್ರಕರ್ತರು ಸಮಸ್ಯೆ,ಸವಾಲುಗಳ ಮಧ್ಯೆ ಅತಂತ್ರರಾಗುತ್ತಿರುವುದು ಕಳವಳಕಾರಿ ಎಂದು ಹಿರಿಯ ಪತ್ರಕರ್ತ,ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ತಿಳಿಸಿದರು.
          ಕನ್ನಡ ಗ್ರಾಮದಲ್ಲಿ ನಡೆಯುತ್ತಿರುವ ಏಳನೆ ಕೇರಳ ರಾಜ್ಯಮಟ್ಟದ ಕನ್ನಡ ಸಮ್ಮೇಳನದ ಉದ್ಘಾಟನಾ ದಿನವಾದ ಗುರುವಾರ ಸಂಜೆ ನಡೆದ ಕಾಸರಗೋಡಿನ ಕನ್ನಡ ಮಾದ್ಯಮ ಕ್ಷೇತ್ರದ ಸಮಸ್ಯೆ ಸವಾಲು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಕಾಸರಗೋಡಿನ ಅಸಂಖ್ಯ ಕನ್ನಡ ಪತ್ರಕರ್ತರು ಕರ್ನಾಟಕ ಸಹಿತ ವಿವಿಧ ಪ್ರದೇಶಗಳಲ್ಲಿ ಉಲ್ಲೇಖಾರ್ಹರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷೆ,ಸಂಸ್ಕøತಿಯ ತಳಮಟ್ಟದ ಕ್ರಾಂತಿಯ ಸೃಷ್ಟಿ ಮತ್ತು ಪ್ರೇರಣಾತ್ಮಕ ಶಕ್ತಿ ಸಂಚಯಕಾರರಾಗಿ ಅನುಪಮ ಸೇವಾತತ್ಪರೆತೆಯ  ಮಾಧ್ಯಮ ಪ್ರತಿನಿಧಿಗಳು ಪ್ರಸ್ತುತ ಗಡಿನಾಡಿಗೆ ಸಂಬಂಧಿಸಿ ಸಮಕಾಲೀನ ತಲ್ಲಣಗಳಿಂದ ಸಮಸ್ಯೆಗಳ ಸುಳಿಯಲ್ಲಿ ತೊಳಲುತ್ತಿದ್ದಾರೆ ಎಂದರು. ಕನ್ನಡ ಪತ್ರಿಕೆಗಳ ಓದುಗರೂ ಕುಸಿಯುತ್ತಿರುವುದು ಆತಂಕಕಾರಿಯಾಗಿದ್ದು ಯುವ ಜನಾಂಗದಲ್ಲಿ ಓದುವ ಹವ್ಯಾಸ ಬೆಳೆಸುವ,ಮನೆಮನಗಳಿಗೂ ಪತ್ರಿಕೆಗಳನ್ನು ತಲಪಿಸುವ ಪ್ರಯತ್ನಗಳಾಗಬೇಕು ಎಂದು ತಿಳಿಸಿದರು. ಕೇರಳ ಗ್ರಂಥಾಲಯ ಕೌನ್ಸಿಲ್ ನ ಸುಧೀರ್ಘ ಅವಧಿಯ ಕ್ರಿಯಾಶೀಲ ಚಟುವಟಿಕೆಗಳನ್ನು ಉದಾಹರಿಸಿದ ಅವರು ಇಂತಹ ಪ್ರಯತ್ನ ಕನ್ನಡದಲ್ಲೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
        ಸಮ್ಮೇಳನದ ಸರ್ವಾಧ್ಯಕ್ಷ ಗಣೇಶ್ ಕಾಸರಗೋಡು ಉಪಸ್ಥಿತರಿದ್ದ ಸಭೆಯಲ್ಲಿ ಪತ್ರಕರ್ತ  ವಿರಾಜ್ ಅಡೂರು, ಜಯ ಮಣಿಯಂಪಾರೆ, ಪತ್ರಿಕಾ ಓದುಗರಾದ ತಾರಾನಾಥ ಮಧೂರು,ಕೆಸಿಎನ್ ಚಾನೆಲ್ ನಿರ್ದೇಶಕ ಪುರುಷೋತ್ತಮ ನಾಯಕ್ ಉಪಸ್ಥಿತರಿದ್ದು ಮಾತನಾಡಿದರು.ಜಗದೀಶ್ ಕೂಡ್ಲು ಉಪಸ್ಥಿತರಿದ್ದರು.
       ಸಮಾರಂಭದಲ್ಲಿ ಪತ್ರಿಕಾ ಏಜೆಂಟ್ ರಾಮಚಂದ್ರ ಚೆಟ್ಟಿಯಾರ್ ಬದಿಯಡ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ನಾಯಕ್ ಕುಂಬಳೆ ಅವರನ್ನು ಗೌರವಿಸಲಾಯಿತು. ಕರಾವಳಿ ಸಾಂಸ್ಕø್ರತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.ಪತ್ರಕರ್ತ ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ,ವಿಷಯ ಮಂಡಿಸಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries