ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಮಂಜೂರಾಗಿ ಲಭಿಸಿದ ಹೊಸ ವಾಹನಗಳ ಪ್ಲ್ಯಾಗ್‍ಆಫ್ ಸಮಾರಂಭ ಮಂಗಳವಾರ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವಠಾರದಲ್ಲಿ ಜರುಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್. ಸಾಬು ಪ್ಲ್ಯಾಗ್‍ಆಪ್ ನಡೆಸಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ಪ್ರಶೋಬ್, ಡಿವೈಎಸ್‍ಪಿಗಳಾದ ಬಾಲಕೃಷ್ಣನ್ ನಾಯರ್, ಹಸೈನಾರ್, ಹರೀಶ್ಚಂದ್ರ ನಾಯ್ಕ್, ಜೈಸನ್ ಅಬ್ರಹಾಂ, ಪಿ.ಕೆ ಸುಧಾಕರನ್ ಮುಂತಾದವರು ಉಪಸ್ಥಿತರಿದ್ದರು.
ಕಾಸರಗೋಡು, ವಿದ್ಯಾನಗರ, ಕುಂಬಳೆ, ಬೇಕಲ, ಬೇಡಡ್ಕ, ರಾಜಾಪುರಂ, ಹೊಸದುರ್ಗ, ಚಿತ್ತಾರಿಕಲ್, ನೀಲೇಶ್ವರ ಹಾಗೂ ಚೀಮೇನಿ ಪೊಲೀಸ್ ಠಾಣೆಗಳಿಗೆ ಈ ಹೊಸ ವಾಹನ ಲಭ್ಯವಾಗಲಿದೆ.