ಮಂಜೇಶ್ವರ: ಸುಂಕದಕಟ್ಟೆ ಬಜ್ಪೆಯ ಶ್ರೀಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ಮುಡಿಮಾರು ಚಂದ್ರಹಾಸ ಪೂಜಾರಿಯವರ 22ನೇ ವರ್ಷದ ಸೇವಾ ಬಯಲಾಟ ಪಾವೂರು ಮುಡಿಮಾರಿನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಶ್ರೀದೇವಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸರ್ಪಸಂಬಂಧ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಯಕ್ಷರಾಜ ಅರುವ ಕೊರಗಪ್ಪ ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಸೇವಾಕರ್ತ ಚಂದ್ರಹಾಸ ಪೂಜಾರಿ, ಮೇಳದ ವ್ಯವಸ್ಥಾಪಕ ಶ್ರೀನಿವಾಸ ಸಾಲ್ಯಾನ್, ಸಸಿಹಿತ್ಲು ಶ್ರೀಭಗವತಿ ಮೇಳದ ವ್ಯವಸ್ಥಾಪಕ ರಾಜೇಶ್ ಗುಜರನ್, ದೇವಂದಪಡ್ಪು ಶ್ರೀಮಹಾವಿಷ್ಣು ಕ್ಷೇತ್ರ ಸಮಿತಿಯ ಸಂಚಾಲಕ ಐತ್ತಪ್ಪ ಶೆಟ್ಟಿ, ಮುಡಿಮಾರು ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ರವಿ ಮುಡಿಮಾರು, ಮಾಧವ ಪೂಜಾರಿ ಕುದುಕೋರಿ, ನಾಗೇಶ್ ಬಳ್ಳೂರು, ನವೀನರಾಜ್ ಮುಡಿಮಾರು, ಸುರೇಶ್ ಮುಡಿಮಾರು, ಪ್ರಕಾಶ್ ಅಂಚನ್, ಪ್ರಕಾಶ್ ಕುಮಾರ್ ಮುಡಿಮಾರು, ರಾಕೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.