HEALTH TIPS

ಪಡ್ರೆ ಚಂದು ಶತಮಾನೋತ್ಸವ:ಕುಂಬ್ಳೆ, ಶೆಟ್ಟಿಗಾರ, ಮವ್ವಾರು ಸೇರಿದಂತೆ ಸಾಧಕ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ, ಮಕ್ಕಳ ಯಕ್ಷಗಾನೋತ್ಸವ


       ಪೆರ್ಲ:ತೆಂಕಣ ಯಕ್ಷಗಾನದ ಅಭ್ಯುದಯಕ್ಕೆ ಅಸಂಖ್ಯ ಪ್ರತಿಭಾವಂತ ಶಿಷ್ಯರತ್ನಗಳನ್ನು ಧಾರೆ ಎರೆದ ಗುರುವರ್ಯ, ಶ್ರೇಷ್ಟ ಕಲಾವಿದ ದಿ.ಪಡ್ರೆ ಚಂದು ಜನ್ಮ ಶತಮಾನೋತ್ಸವ ವರ್ಷಾಚರಣೆ ಸಂಭ್ರಮದ ಅಂಗವಾಗಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಫೆ.22, 28, 29ರಂದು ಜನ್ಮ ಶತಮಾನೋತ್ಸವ ಸಮಾರಂಭಗಳು ಜರುಗಲಿದ್ದು, ಯಕ್ಷಗಾನ ಕಲಾರಂಗದ ಸಾಧನೆಗೆ ಹಲವು ಪ್ರಶಸ್ತಿಗಳು ಪ್ರದಾನವಾಗಲಿದೆ.
       ಆಟ-ಕೂಟಗಳ ಮಾತಿನ ಚತುರ, ಸುಪ್ರಸಿದ್ಧ ಕಲಾವಿದ ಕುಂಬಳೆ ಸುಂದರರಾವ್ ಅವರಿಗೆ ಪಡ್ರೆ ಚಂದು ಶತಮಾನೋತ್ಸವ ಪ್ರಶಸ್ತಿ, ದಿ.ಪಡ್ರೆ ಚಂದು ಅವರ ಶಿಷ್ಯ, ಬಣ್ಣದ ವೇಷಗಳ ಬಿನ್ನಾಣಗಾರ, ಹನುಮಗಿರಿ ಮೇಳದ ಖ್ಯಾತ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ವಷರ್ಂಪ್ರತಿ ನೀಡಲಾಗುವ ಪಡ್ರೆ ಚಂದು ಪ್ರಶಸ್ತಿ, ದಿ.ಪಡ್ರೆ ಚಂದು ಅವರ ಪ್ರಥಮ ಪುತ್ರ, ಕಟೀಲು ಮೇಳದ ಹಿರಿಯ ಕಲಾವಿದ ಪಡ್ರೆ ಕುಮಾರ ಅವರಿಗೆ ಶತಮಾನೋತ್ಸವ ವರ್ಷದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ವತಿಯಿಂದ ನೀಡಲಾಗುವ 'ಅಡ್ಕಸ್ಥಳ ಪ್ರಶಸ್ತಿ' ಹಾಗೂ ಪಡ್ರೆ ಚಂದು ಜನ್ಮ ಶತಮಾನೋತ್ಸವ ಅಭಿನಂದನಾ ಸನ್ಮಾನಕ್ಕೆ ತೆಂಕುತಿಟ್ಟಿನ ಸೃಜನಶೀಲ ಹಾಸ್ಯಗಾರ, ಪ್ರಸ್ತುತ ಕಟೀಲು ಮೇಳದಲ್ಲಿರುವ ಗಡಿನಾಡು ಕಾಸರಗೋಡಿನ ಅಭಿಜಾತ ಪ್ರತಿಭೆ, ಖ್ಯಾತ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಆಯ್ಕೆಯಾಗಿದ್ದಾರೆ.
      ಇದೇ ಮೊದಲ ಬಾರಿ ನೀಡಲಾಗುವ 'ದೇವಕಾನ ಶ್ರೀಕೃಷ್ಣ ಭಟ್ ಪ್ರಶಸ್ತಿ'ಗೆ ಪ್ರಸಾಧನ ಕಲಾವಿದ ನಾರಾಯಣ ಸಜಂಕಿಲ, ವಿಶೇಷ ಪ್ರಶಸ್ತಿಗೆ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಆಯ್ಕೆಯಾಗಿದ್ದಾರೆ.ಬಣ್ಣದ ವೇಷಧಾರಿ ರಾಧಾಕೃಷ್ಣ ಮಾಸ್ತರ್ ಪೈವಳಿಕೆ ದೇವಕಾನರನ್ನು ಸಂಸ್ಮರಿಸಿ ಮಾತನಾಡಲಿದ್ದಾರೆ.ತೆಂಕುತಿಟ್ಟು ಯಕ್ಷಗಾನಕ್ಕೆ 70ರ ದಶಕದಿಂದ 90ರ ತನಕ ಅನೇಕ ಶಿಷ್ಯ ರತ್ನಗಳನ್ನು ಧಾರೆ ಎರೆದಿರುವ ದಿ.ಪಡ್ರೆ ಚಂದು ಹೆಸರಲ್ಲಿ ನಾಟ್ಯ ತರಬೇತಿ ಕೇಂದ್ರ ಆರಂಭಿಸಿ ಗುರುಕಾಣಿಕೆ ಸಮರ್ಪಿಸುತ್ತಿರುವ ಯಕ್ಷಗಾನನಾಟ್ಯಾಚಾರ್ಯ ಸಬ್ಬಣಕೋಡಿ ರಾಮಭಟ್ ನೇತೃತ್ವದಲ್ಲಿ ಜನ್ಮ ಶತಮಾನೋತ್ಸವ ಸಮಾರಂಭ ನಡೆಯಲಿದ್ದು ನಿವೃತ್ತ ಶಿಕ್ಷಕ, ಮದ್ದಳೆಗಾರ ಪದ್ಮನಾಭ ರಾವ್ ಅವರಿಗೆ ಗುರುವಂದನೆ, ಫೆ.22ರಿಂದ 29ರ ತನಕ ಪೆರ್ಲ ಯಕ್ಷಗಾನ ಕೇಂದ್ರದಲ್ಲಿ ಸಬ್ಬಣಕೋಡಿ ಶಿಷ್ಯಬಳಗದ 12 ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries