ಮುಳ್ಳೇರಿಯ: ಉಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ದೇವರ ಕ್ಷೇತ್ರ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹಾಗೂ ಕ್ಷೇತ್ರ ಶಿಲ್ಪಿ ಬೆದ್ರಡ್ಕ ರಮೇಶ ಕಾರಂತರ ನಿರ್ದೇಶನದಂತೆ `ಪಾದುಕಾನ್ಯಾಸ' ವಿ„ಯನ್ನು ನೆರವೇರಿಸಲಾಯಿತು.
ಕ್ಷೇತ್ರದ ಮುಖ್ಯ ಅರ್ಚಕ ತ್ರಿವಿಕ್ರಮ ಮನೋಳಿತ್ತಾಯ ಅವರು ದೀಪ ಪ್ರಜ್ವಲನಗೊಳಿಸಿ ಪೂಜಾವಿಧಿ ವಿಧಾನವನ್ನು ನಡೆಸಿದರು. ಧಾರ್ಮಿಕ ರಂಗದ ಹಿರಿಯ ಮೇಧಾವಿ ಹಾಗೂ ಜೀರ್ಣೋದ್ಧಾರ ಸಮಿತಿಯ ಕೋಶಾ„ಕಾರಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶಿಲಾಮಯ ಗರ್ಭಗುಡಿ ನಿರ್ಮಾಣದ ಶಿಲ್ಪಿ ಈಶ್ವರಚಂದ್ರ ಕಾರ್ಕಳ ಅವರು ಶಿಲ್ಪಶಾಸ್ತ್ರ ವಿಧಿಯಂತೆ ಅಡಿಗಲ್ಲು ಪೂಜೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ವೆಂಕಟ್ರಮಣ ಮಾಸ್ತರ್, ಉಜಂಪಾಡಿ ವಿಶ್ವನಾಥ ರೈ, ವಾಲ್ತಾಜೆ ದುಗ್ಗಪ್ಪ ಗೌಡ, ಶಾಂತಿಮೂಲೆ ಜಗನ್ನಾಥ ರೈ, ಮುದಿಯಾರು ಸಂಜೀವ ರೈ, ಎಂ.ರಮಾನಂದ ರೈ ದೇಲಂಪಾಡಿ, ಲಂಬೋದರ ಶೆಟ್ಟಿ ಮಣಿಯೂರು, ಚಿಕ್ಕಪ್ಪ ರೈ ಮಣಿಯೂರು, ವಿನಯ ಪ್ರಸಾದ್ ಮಿತ್ತಂತರ, ಶಾಂತಿಮೂಲೆ ವೇಣು, ರಘುನಾಥ ರೈ ಶಾಂತಿಮಲೆ, ಕಲ್ಲಡ್ಕ ಸೀತಾರಾಮ ರೈ, ಚಂದ್ರಶೇಖರ ರೈ ಕಡೆಂಜ, ಸಾಯಿಕುಮಾರ್ ಮಣಿಯೂರು. ಎಂ.ವಿಶ್ವನಾಥ ರೈ ಮಣಿಯೂರು ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ದೇವ ಪ್ರಾರ್ಥನೆಯೊಂದಿಗೆ ಪ್ರಾರ್ಥಿಸಿದ ಸಮಿತಿಯ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಸ್ವಾಗತಿಸಿ, ವಂದಿಸಿದರು.