ನವದೆಹಲಿ: ಕಂಬಳ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡಿ ದೇಶದ ಗಮನ ಸೆಳೆದಿರುವ ಕರ್ನಾಟಕದ ಶ್ರೀನಿವಾಸ್ ಗೌಡ ಅವರ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಪರಾಷ್ಟ್ರಪತಿಗಳ ಅಧಿಕೃತ ಟ್ವೀಟ್ ಖಾತೆಯಿಂದ ಬರೆದಿರುವ ವೆಂಕಯ್ಯ ನಾಯ್ಡು, ಕಂಬಳ ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿರುವ ಹಾಗೂ ಉಸೇನ್ ಬೋಲ್ಟ್ ಅವರ ಸಾಧನೆಯೊಂದಿಗೆ ಹೋಲಿಕೆಯಾಗುತ್ತಿರುವ ಶ್ರೀನಿವಾಸ್ ಗೌಡ ಅವರಿಗೆ ಅಭಿನಂದನೆಗಳು. ದೇಶದಲ್ಲಿ ಸುಪ್ತವಾಗಿರುವ ಹಲವಾರು ಪ್ರತಿಭೆಗಳಿವೆ. ಅದನ್ನು ಗುರುತಿಸಿ, ಪೆÇೀಷಿಸಿ ಸಂಪೂರ್ಣವಾದ ಸಾಮಥ್ರ್ಯವನ್ನು ಹೊರತರುವ ಅಗತ್ಯವಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
Kudos to Karnataka’s #SrinivasaGowda for achieving a rare feat during a Buffalo Race and being compared to Usain Bolt. There is a lot of hidden talent in the country which needs to be recognized, respected and to be nurtured to realise the full potential. #Kambala #UsainBolt
242 people are talking about this