ಬದಿಯಡ್ಕ: ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಮಾರ್ಚ್ 20 ರಿಂದ 28 ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಯ ಪೂರ್ವಭಾವಿ ಸಭೆಯು ಶ್ರೀ ಕ್ಷೇತ್ರದಲ್ಲಿ ಭಾನುವಾರ ಜರಗಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೌರೀ ಶಂಕರ ರೈ ಅಧ್ಯಕ್ಷತೆಯನ್ನು ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಏವುಂಜೆ ಶಾಮ ಭಟ್, ಪೆರ್ವ ಕೃಷ್ಣ ಭಟ್, ಪುದುಕೋಳಿ ಶ್ರೀಕೃಷ್ಣ ಭಟ್, ಶಶಿರಾಜ ನೀಲಂಗಳ, ಸುರೇಶ ಎವಿಂಜೆ, ಅಳಕ್ಕೆ ಗಣೇಶ ಭಟ್, ಮಹಿಳಾ ಸಮಿತಿಯ ಮೈನಾಜಿ ರೈ, ವಿವಿಧ ಮಹಿಳಾ ಸಮಿತಿಯವರು, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಪಡಿಯಡ್ಪು ಹಾಗೂ ವಿವಿಧ ಸಮಿತಿಯ ಪದಾ„ಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಕಾರ್ಯದಂಗವಾಗಿ ನಡೆದು ಬರುತ್ತಿರುವ ಗಣಪತಿ ಹವನ ದುರ್ಗಾಪೂಜೆಯು ಫೆ.21 ಶುಕ್ರವಾರ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಬೆಳಗ್ಗೆ 8 ಗಂಟೆಗೆ ಗಣಪತಿ ಹವನ, ರಾತ್ರಿ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ದುರ್ಗಾ ಪೂಜೆ ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಕಾರ್ತಿಕ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಮುಂದಿನ ಕಾರ್ಯಾವಲೋಕನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿಸಲಾಗಿದೆ.