ಕಾಸರಗೋಡು: ವಿದ್ಯುತ್ ಪ್ರಸರಣ ವಿಭಾಗದ ಉದುಮ ಭಟ್ಟತ್ತೂರು ಮೈಕಾನ ಪರಿಸರದ ವ್ಯಾಪ್ತಿಯಲ್ಲಿ ತೀವ್ರ ಸಂಕಷ್ಟಕ್ಕೆ ಕಾರಣವಾದ ಪೋಲ್ಟೇಜ್ ಸಮಸ್ಯೆಗೆ ಕೊನೆಗೂ ಪರಿಹಾರ ಒದಗಿಸಲಾಗಿದೆ.
ಪ್ರಸ್ತುತ ಮೈಕಾನದಲ್ಲಿ ನೂತನ ವಿದ್ಯುತ್ ವಿಭಾಜಕವೊಂದನ್ನು ಸ್ಥಾಪಿಸಲಾಗಿದ್ದು, ವಿದ್ಯುತ್ ವಿಭಾಗೀಯ ಹಿರಿಯ ಮುಖ್ಯ ಅಭಿಯಂತರ ಸುರೇಂದ್ರ ಪಿ. ಅವರ ನೇತೃತ್ವದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಲಾಯಿತು. ಮುಖ್ಯ ಅಭಿಯಂತರ ನಾಗರಾಜ ಭಟ್ ಕೆ., ಸಹಾಯಕ ಅಭಿಯಂತರ ಮುಖೇಶ್ ಕುಮಾರ್, ಜಿತೇಶ್, ಗಿರೀಶ್, ವಾಸುದೇವ ಭಟ್ ಭಟ್ಟತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಕೃಷಿ ಪ್ರಧಾನ ವ್ಯಾಪ್ತಿಯಾಗಿರುವ ಇಲ್ಲಿ ಈವರೆಗೆ ಪೋಲ್ಟೇಜ್ ಸಮಸ್ಯೆಯಿಂದ ವ್ಯಾಪಕ ಸಮಸ್ಯೆಗಳಾಗುತ್ತಿತ್ತು. ಅಗತ್ಯ ಸಮಯದಲ್ಲಿ ನೀರಾವರಿ ಸಹಿತ ವಿವಿಧ ಸವಾಲುಗಳನ್ನು ಎದುರಿಸಿದ್ದರು. ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂಧಿಸಿದ ಇಲಾಖೆ 5 ಲಕ್ಷ ರೂ.ಗಳ ಮೊತ್ತ ಬಳಸಿ ನೂತನ ವಿದ್ಯುತ್ ವಿಭಾಜಕ ನಿರ್ಮಿಸಿದೆ.