ಪೆರ್ಲ : ಜಗತ್ತು ಎಷ್ಟೇ ತಂತ್ರಜ್ಞಾನದಿಂದ ಮುಂದುವರಿದರೂ ಜನರ ಅಸ್ತಿತ್ವಕ್ಕೆ ಕೃಷಿಯೇ ಮೂಲವಾಗಿದೆ. ಕೃಷಿ ಇಲ್ಲದೆ ಜೀವನವೇ ಇಲ್ಲ. ಕೃಷಿಯನ್ನು ನಿರ್ಲಕ್ಷಿಸಿದರೆ ಅಭಿವೃದ್ದಿ ಅಸಾಧ್ಯವಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವುದು ಇಂದಿನ ಅತ್ಯಂತ ಅನಿವಾರ್ಯವಾಗಿದೆಯೆಂದು ಕ್ಯಾಂಪೆÇ್ಕೀ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ಹೇಳಿದರು.
ಅವರು ಶನಿವಾರ ಪೆರ್ಲ ನಾಲಂದ ಕಾಲೇಜು, ಕ್ಯಾಂಪೆÇ್ಕೀ ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‍ನ ಸಹಯೋಗದಲ್ಲಿ ನಾಲಂದ ಕಾಲೇಜು ಪರಿಸರದಲ್ಲಿ ಆಯೋಜಿಸಲಾದ ಬೃಹತ್ `ಕೃಷಿ ಮೇಳ `ವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇವರ ನಾಡು, ಆಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಲ್ಪಡುವ ಕೇರಳದಲ್ಲಿ ಅಸಮಾನತೆಯ ಪರಕಾಷ್ಠೆಯಲ್ಲಿರುವಾಗ ಬ್ರಹ್ಮಶ್ರೀ ನಾರಾಯಣ ಗುರುಗಳು ಇಲ್ಲಿ ಹುಟ್ಟಿ ಸಮಾನತೆಗೆ ಹೋರಾಡಿದವರು. ದೇಶದಲ್ಲಿ ಕೃಷಿ ಕ್ರಾಂತಿಯನ್ನು ಮಾಡಿದವರು ವರ್ಗಿಸ್ ಕುರಿಯನ್ ಕೇರಳದವರೇ ಆಗಿದ್ದಾರೆ. ಅದರಂತೆ ಒಂದು ಶಿಕ್ಷಣ ಕೇಂದ್ರದಲ್ಲಿ ಕೃಷಿ ಮೇಳವನ್ನು ಆಯೋಜಿಸಿ ನಾಡಿಗೆ ಈ ಕಾಲೇಜು ಮಾದರಿಯಾಗಿದೆ. ಶೈಕ್ಷಣಿಕ ಹಾಗೂ ಕೃಷಿ ಕ್ಷೇತ್ರವು ಒಟ್ಟಾಗಿ ಕೆಲಸ ಮಾಡಿದರೆ ಅಭಿವೃದ್ದಿ ಸಾಧ್ಯ. ಅಂದು ಭಾರತವನ್ನು ಬ್ರಿಟಿಷರು ಭಿಕ್ಷುಕರ ದೇಶವೆಂದು ಕರೆದರೂ ಇಂದು ಜಗತ್ತಿನಲ್ಲಿಯೇ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶದಲ್ಲೊಂದಾಗಿ ಗುರುತಿಸುವಲ್ಲಿ ಸಾಫಲ್ಯತೆ ಪಡೆದಿದೆ. ಜಗತ್ತಿನಲ್ಲಿ ಕೃಷಿ ಉತ್ಪಾದನೆಯಲ್ಲಿ 5ನೇ ಸ್ಥಾನವನ್ನು ಪಡೆದಿದೆಯೆಂದರು.
ಹೊಟ್ಟೆಗೆ,ಬಟ್ಟೆಗೆ ಕೊರತೆ ಇಂದಿಲ್ಲ. ಆದರೆ ತಿಳುವಳಿಕೆಯ ಕೊರತೆ ಎದ್ದು ಕಾಣುತ್ತದೆ. ಕೃಷಿಕನ ಮಗನು ಕೃಷಿಕನಾಗಲು ಇಚ್ಚಿಸುವುದಿಲ್ಲ. ಯುವಕರು ಕೃಷಿ ಕ್ಷೇತ್ರದತ್ತ ಆಕರ್ಷಿಸುವಂತಾಗಬೇಕು, ಹೆಚ್ಚಿನ ಉತ್ಸಾಹ ಕೃಷಿಯತ್ತ ನೀಡುವಂತಾಬೇಕು. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರವು ಕೃಷಿಗೆ ಹೆಚ್ಚಿನ ಬಲ ನೀಡುತ್ತಿದೆಯೆಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಸಹಕಾರಿ ಬ್ಯಾಂಕ್ ಗಳ ಜಿಲ್ಲಾ ಸಹಾಯಕ ನಿರ್ದೇಶಕ ಜಯಚಂದ್ರನ್ ಮಾತನಾಡಿ, ಕೃಷಿಕರು ಇಲ್ಲದಿದ್ದರೆ ಭಾರತವೇ ಇಲ್ಲ .ವೈದ್ಯಕೀಯ-ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗುವುಂತೆ ಕೃಷಿ ಕಾಲೇಜುಗಳು ಸ್ಥಾಪನೆಯಾಗುತ್ತಿಲ್ಲ. ಕೃಷಿ ಸಂಶೋಧನೆ, ಆಧುನಿಕ ತಂತ್ರಜ್ಞಾನಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಇವೆಲ್ಲವೂ ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗುತ್ತಿದೆ. ಸಹಕಾರಿ ಕ್ಷೇತ್ರವು ಕೃಷಿ ಅಭಿವೃದ್ದಿಗೆ ಮುತುವರ್ಜಿ ವಹಿಸುತ್ತಿರುವುದು ಆಶಾದಾಯಕವಾಗಿದೆ. ತಂತ್ರಜ್ಞಾನವು ಹಳ್ಳಿಯ ಕೃಷಿಕನಿಗೆ ತಲುಪಬೇಕು. ಪ್ರತಿಯೊಬ್ಬರು ತಮ್ಮ ಆಹಾರಕ್ಕೆ ಬೇಕಾದ ಕೃಷಿ ಉತ್ಪನ್ನಗಳನ್ನು ತಮ್ಮಲ್ಲಿ ಬೆಳೆದರೆ ಅದು ನೈಜ ಸ್ವಾವಲಭಿತನವಾಗಿದ್ದು, ವಿಷರಹಿತವೂ ಆಗಿರುತ್ತದೆಯೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಇಂದು ಆಧುನಿಕತೆ ಹಾಗೂ ರಂಗು ರಂಗಿನ ಜೀವನಕ್ಕೆ ಮಾರುಹೋಗಿ ಕೃಷಿಯು ನಿಧಾನವಾಗಿ ಬದಿಗೆ ಸರಿಯುತ್ತಿದೆ. ಕೃಷಿಯೇ ನಮ್ಮ ನಿಜ ಸಂಸ್ಕøತಿಯಾಗಿದ್ದು, ಅದರ ಬಗ್ಗೆ ಆಸಕ್ತರಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ, ಸಾವಯವ ಕೃಷಿ ಪದ್ಧತಿಯನ್ನು ಬಳಕೆ ಮಾಡುವುದು, ಸರಳ ಜೀವನ ಅಳವಡಿಸಿಕೊಳ್ಳುವುದು ನಮ್ಮ ಬದುಕಾಗಬೇಕು . ಒಳ್ಳೆಯ ಗಾಳಿ, ಸಂತೋಷ ಸಿಗುವುದು ಹಳ್ಳಿಯಿಂದ ಮಾತ್ರವಾಗಿದೆ ಎಂದು ತಿಳಿಸಿದರು.
ನಾಲಂದ ಕಾಲೇಜು ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ ವಂದಿಸಿದರು. ಉಪನ್ಯಾಸಕ ಅಮೃತ ಹಾಗೂ ವಿನೀಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ, ಕೊಕ್ಕೋ ಕೃಷಿ ಸವಾಲುಗಳು, ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ, ಸಾವಯವ ಕೃಷಿ ಬಗ್ಗೆ ವಿಸ್ಕøತ ವಿಚಾರಗೊಷ್ಠಿಗಳು ತಜ್ಞರು ಹಾಗೂ ಕೃಷಿಕರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು. ಬೆಳಿಗ್ಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ವಸ್ತು ಪ್ರದರ್ಶನವನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ವಿಶೇಷತೆ:
1) ಅಬಾಲವೃದ್ದರು ಉಪಯೋಗಿಸಬಹುದಾದ ವಿವಿಧ ರೀತಿಯ ಯಂತ್ರೋಪಕರಣಗಳ ಆವಿಷ್ಕಾರದ ಪ್ರದರ್ಶನ, ಮಾರಾಟ, ಬೀಜಗಳು, ನರ್ಸರಿ ಗಿಡಗಳು, ಕೃಷಿ ಉತ್ಪನ್ನಗಳು ,ತಿಂಡಿ ತಿನಸು ,ಪುಸ್ತಕ ಪ್ರದರ್ಶನಗಳ ಸುಮಾರು ನೂರಕ್ಕೂ ಮಿಕ್ಕಿದ ಸ್ಟಾಲ್‍ಗಳು ಇದ್ದವು. ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಕೃಷಿಕರು ಕೃಷಿ ಮೇಳದಲ್ಲಿ ಭಾಗವಹಿಸಿದರು.
2) ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೃಷಿ ಯಂತ್ರೋಪಕರಣಗಳ ನಿರ್ಮಾಣ, ಪ್ರಚಾರದಲ್ಲಿ ಅತ್ಯುತ್ಕøಷ್ಣರಾಗಿ ಗುರುತಿಸಲ್ಪಟ್ಟವರಿಗೆ ಕ್ಯಾಂಪ್ಕೋ ವತಿಯಿಂದ ಮೊತ್ತಮೊದಲ ಬಾರಿಗೆ ಕೊಡಮಾಡುವ ನಗದು ಬಹುಮಾನಗಳನ್ನು ನೀಡಲಾಯಿತು. ಪುತ್ತೂರು ಪರ್ಲಡ್ಕದ ದುರ್ಗಾ ಇಂಜಿನಿಯರಿಂಗ್ ವಕ್ರ್ಸ್ ನ ನಾರಾಯಣ ನೆಲ್ಲಿತ್ತಾಯ ಅವರಿಗೆ ಪ್ರಥಮ 1 ಲಕ್ಷ ನಗದು ಬಹುಮಾನ, ಸುಳ್ಯದ ಅಪರ್ಣಾ ಇಂಜಿನಿಯರಿಂಗ್ ವಕ್ರ್ಸ್ ನ ರಾಮಚಂದ್ರ ಭಟ್ ಅವರಿಗೆ ದ್ವಿತೀಯ ಬಹುಮಾನ 50 ಸಾವಿರ ನಗದು ಹಾಗೂ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ವಕ್ರ್ಸ್ ನ ಅಕ್ಷಯ್ ಮತ್ತು ಬಳಕ್ಕೆ ಪ್ರೋತ್ಸಾಹಕ 10 ಸಾವಿರ ರೂ.ನಗದು ಬಹುಮಾನ ನೀಡಲಾಯಿತು. ಈ ಬಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ಅವರು ಸಮರಸ ಸುದ್ದಿಯೊಂದಿಗೆ ಮಾತನಾಡಿ ಇದೇ ಮೊದಲ ಬಾರಿಗೆ ಕ್ಯಾಂಪ್ಕೋ ಇಂತಹ ಯತ್ನಕ್ಕೆ ತೊಡಗಿಸಿಕೊಂಡಿದ್ದು, ಹೆಚ್ಚೆಚ್ಚು ಅವಿಷ್ಕಾರ, ಬಳಕೆ ನಡೆಯಬೇಕು ಎಮದು ತಿಳಿಸಿದರು.
3) ಮುಣ್ಚಿಕ್ಕಾನ ಗಣೇಶ್ ಭಟ್ ಅವರ ನಂದಿಕೇಶ್ವರ ಗೋಶಾಲೆಯ ನೇತೃತ್ವದಲ್ಲಿ ಕೃಷಿ ಉತ್ಸವದಲ್ಲಿ ಉಚಿತವಾಗಿ ನೀಡಿದ ಮಸಾಲೆ ಮಜ್ಜಿಗೆ ಗಮನ ಸೆಳೆಯಿತು. ಅಡಿಕೆ ಹಾಳೆಯ ಟೊಪ್ಪಿ, ಎದೆಕವಚಗಳಿಂದ ಗಮನ ಸೆಳೆದರು.