ಕಾಸರಗೋಡು: ಆಲಂಪಾಡಿ ವೆಂಕಟೇಶ ಶ್ಯಾನುಭೋಗ್ ಮೆಮೋರಿಯಲ್ 35 ನೇ ಸಂಗೀತೋತ್ಸವ ಎಸ್.ವಿ.ಟಿ. ರಸ್ತೆಯ `ವೆಂಕಟೇಶ' ದಲ್ಲಿ ನಡೆಯಿತು.
ಕೆ.ಕೃಷ್ಣ ಶ್ಯಾನುಭೋಗ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಪಿಸಿಆರ್‍ಐಯ ನಿರ್ದೇಶಕಿ ಡಾ.ಅನಿತಾ ಕರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವಿದುಷಿ ಶಕುಂತಳಾ ಕೃಷ್ಣ ಭಟ್ ಕುಂಚಿನಡ್ಕ ಅವರಿಗೆ ಎ.ವಿ.ಎಸ್. ಪ್ರಶಸ್ತಿ ಪ್ರದಾನ ನಡೆಯಿತು. ಸುಕುಮಾರ ಆಲಂಪಾಡಿ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಶಿಷ್ಯ ವೃಂದದವರಿಂದ ಸಂಗೀತಾರಾಧನೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ವಿ.ಆರ್.ದಿಲೀಪ್ ಕುಮಾರ್ ತ್ರಿಚ್ಚೂರು ಅವರಿಂದ ಸಂಗೀತ ಕಚೇರಿ ಜರಗಿತು. ವಯಲಿನ್‍ನಲ್ಲಿ ವಿದ್ವಾನ್ ಕೆ.ಜೆ.ದಿಲೀಪ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಡಾ|ಶಂಕರ್‍ರಾಜ್, ಘಟಂನಲ್ಲಿ ವಿದ್ವಾನ್ ಸಂತೋಷ್ ಕುಮಾರ್ ಸಹಕರಿಸಿದರು.