ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಮಾರ್ಚ್ 20 ರಿಂದ 28 ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಮಹಿಳಾ ಘಟಕದ ಸಭೆಯು ಮಂಗಳವಾರ ಕ್ಷೇತ್ರದಲ್ಲಿ ಜರಗಿತು.
ಸಮಿತಿಯ ಅಧ್ಯಕ್ಷೆ ಮೈನಾಜಿ ರೈ ಯವರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಮಹಿಳಾ ಘಟತದ ಪದಾದಿಕಾರಿಗಳು,ಸದಸ್ಯರೊಂದಿಗೆ ಮುಂದಿನ ಕಾರ್ಯದ ಬಗ್ಗೆ ಚರ್ಚಿಸಿ ವಿವಿಧ ಜವಾಬ್ದಾರಿಗಳನ್ನು ವಹಿಸಿ ಕೊಡಲಾಯಿತು. ಬಳಿಕ ಸಭಾಮಂಟಪದ ಸ್ಥಳ,ವಾಹನ ನಿಲುಗಡೆ ಸ್ಥಳ ಸಹಿತ ಪರಿಸರದ ಸ್ಥಳಗಳನ್ನು ಶುಚೀಕರಿಸಲಾಯಿತು.