ಕಾಸರಗೋಡು: ಕೋಟೆಯವರು ಯಾ ರಾಮಕ್ಷತ್ರಿಯ ಸಮಾಜದ ಕುಟುಂಬಸ್ಥರ ದೇವಳವಾದ ಬಂದಡ್ಕ ಶ್ರೀರಾಮನಾಥ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮುಂದಿನ ವರ್ಷ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಜ್ಯೋತಿಷ್ಯ ಚಿಂತನೆ ನಡೆಸಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಇರುವೈಲು ಕೇಶವತಂತ್ರಿವಯವರಲ್ಲಿ ಸಮ್ಮತಿಯನ್ನುಪಡೆಯಲಾಯಿತು.
ಉತ್ಸವವನ್ನು ವೈಭವಪೂರ್ವವಾಗಿ ಆಚರಿಸಲು ಪ್ರಾರಂಭಹಂತದ ಸಮಾಲೋಚನೆ ನಡೆಸಲು ವಿವಿಧ ಕಡೆಗಳಲ್ಲಿ ಸಭೆಗಳನ್ನು ಕರೆದು ಪ್ರಾದೇಶಿಕ ಸಮಿತಿರಚಿಸಲಾಯಿತು. ಕಾಸರಗೋಡು ವಲಯದ ಸಭೆ ಇತ್ತೀಚೆಗೆ ಅಣಂಗೂರಿನ ಅರುಣ್ ಕಾಂಪ್ಲೆಕ್ಸ್‍ನಲ್ಲಿ ಬಂದಡ್ಕ ಶ್ರೀರಾಮನಾಥ ದೇವಳ ಟ್ರಸ್ಟ್‍ನಸದಸ್ಯರಾದ ಗಣಪತಿ ಕೋಟೆಕಣಿ ಅವರಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಹಿರಿಯರಾದ ಸೀತಾರಾಮ ಮಾಸ್ಟರ್ ಅಣಂಗೂರು,ಸೀತರಾಮ ಮೀಪುಗುರಿ, ವಿದ್ಯಾರತ್ನ ಕುಂಬಳೆ ಉಪಸ್ಥಿತರಿದ್ದರು.ದೇವಳದ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತಿರ್ಮಾನಿಸಲಾಯಿತು. ಕುಟುಂಬ ಬಾಂಧವರೆಲ್ಲರಲ್ಲೂ ಗರಿಷ್ಠವಾದ ಆರ್ಥಿಕ ಸಹಾಯಮಾಡಲು ಕೇಳಿಕೊಳ್ಳಲಾಯಿತು. ಸಭೆಯಲ್ಲಿಕಾಸರಗೋಡು ವಲಯ ಸಮಿತಿರಚಿಸಲಾಯಿತು. ಅಧ್ಯಕ್ಷರಾಗಿ ವಿದ್ಯಾರತ್ನ ಕುಂಬಳೆ, ಸಂಚಾಲಕರಾಗಿಕಿರಣ್ ಪ್ರಸಾದ್ ಕೂಡ್ಲು, ಗುರುಪ್ರಸಾದ್‍ಕೋಟೆಕಣಿ, ಹಾಗೂ ಸದಸ್ಯರ ಆಯ್ಕೆ ನಡೆಯಿತು. ಸಭೆಯಲ್ಲಿ ಸತೀಶ್ ದೋಣಿಬಾಗಿಲು ಸ್ವಾಗತಿಸಿದರು. ರವಿ ಮಂಗಳೂರು ವಂದಿಸಿದರು.