ನವದೆಹಲಿ: ಜಗತ್ತಿನಾದ್ಯಂತ ಮಹಾತ್ಮ ಗಾಂಧಿ ಎಂದು ಖ್ಯಾತರಾಗಿರುವ ಮೋಹನದಾಸ್ ಕರಮಚಂದ್ ಗಾಂಧಿ ಓರ್ವ 'ಕಟ್ಟರ್ ಸನಾತನಿ ಹಿಂದೂ" ಆಗಿದ್ದರೆಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಭಾಗವತ್ ರಾಷ್ಟ್ರಪಿತ ಗಾಂಧೀಜಿ ಓರ್ವ ಖಟ್ಟರ್ ಹಿಂದೂ ಆಗಿದ್ದರು ಎಂದೆನ್ನುವ ಮೂಲಕ ಗಾಂಧೀಜಿಯ ಧಾರ್ಮಿಕ ಗುರುತನ್ನು ಅಗೆಯುವ ಕೆಲಸಕ್ಕೆ ಕೈಹಾಕಿದ್ದಾರೆ. "ಅವರು ನಡೆದುಕೊಂಡು ಹಾಗೂ ರೈಲಿನಲ್ಲಿ ಪ್ರಯಾಣಿಸಿದರು ಮತ್ತು ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ನಂತರ ಅವರು 'ಭಾರತೀಯತೆ' ಬಗ್ಗೆ ಚಿಂತನೆ ನಡೆಸಿದರು.ಅವರು ಹಿಂದೂ ಎಂದು ಕರೆಯಲು ಈ ಕಾರಣಗಳು ಸಾಕಾಗಿವೆ.ಅವರು 'ಕಟ್ಟರ್ ಸನಾತನಿ' ಹಿಂದೂ ಆಗಿದ್ದರು ಹಾಗಾಗಿ ಗಾಂಧೀಜಿಯನ್ನು ಅನುಸರಿಸುವವರೆಲ್ಲಾ ವೈವಿಧ್ಯಮಯ ಧರ್ಮಗಳಲ್ಲಿನ ವ್ಯತ್ಯಾಸ ಮತ್ತು ಹೋಲಿಕೆಗಳನ್ನು ಕಂಡುಕೊಳ್ಳಿ ಎಂದಿದ್ದಾರೆ.ಅಲ್ಲದೆ ಭಾಗವತ್ ಇನ್ನೂ 20 ವರ್ಷಗಳಲ್ಲಿ ಗಾಂಧಿಯವರು ಕಂಡಂತೆ ಭಾರತವನ್ನು ನಾವು ಕಾಣಬಹುದಾಗಿದೆ. . ಗಾಂಧಿಯವರ ಪ್ರಾಮಾಣಿಕದೃಷ್ಟಿ ಮತ್ತು ಸತ್ಯದ ಬಗ್ಗೆಯೂ ಅವರು ಒತ್ತಿ ಹೇಳಿದರು.
ಭಾಗವತ್ ಅವರು ನಿನ್ನೆ "ಎನ್‍ಸಿಇಆರ್‍ಟಿ ಮಾಜಿ ಮುಖ್ಯಸ್ಥ, ಸಂಘ ಹಾಗೂ ಬಿಜೆಪಿ ಎಲ್ಲೆಡೆ ಪ್ರಶಂಸೆಗೆ ಒಳಪಡುವ ಜೆ.ಎಸ್. ರಜಪೂತ್ ಬರೆದಿರುವ 'ಗಾಂಧಿ ಕೋ ಸಮಜನೇ ಕಾ ಯಹಿ ಸಮಯ್' ಪುಸ್ತಕವನ್ನುಬಿಡುಗಡೆ ಮಾಡಿದರು. ಮೋದಿ ಸರ್ಕಾರ ಅವರನ್ನು ಯುನೆಸ್ಕೋದ ಕಾರ್ಯನಿರ್ವಾಹಕ ಮಂಡಳಿಯ ಪ್ರತಿನಿಧಿಯಾಗಿ ನೇಮಿಸಿದೆ.
ಶಿಕ್ಷಣದಲ್ಲಿ ನಾವು ಸತ್ಯವನ್ನು ಹೇಳಬೇಕುಸತ್ಯವನ್ನು ಮಾತ್ರ ಕಲಿಸಬೇಕು" ಭಾಗವತ್ ಹ್ಗೇಳಿದರು.್ನ ಸನಾತನ ವಿಷಯದಲ್ಲಿ ಗಾಂಧಿಯವರ ನಂಬಿಕೆಯ ಬಗ್ಗೆ ಭಾಗವತ್ ಹೇಳಿಕೆಯನ್ನು ರಜಪೂತ್ ಬೆಂಬಲಿಸಿದರೂ ಕೂಡ ಧರ್ಮಗಳ ವೈವಿಧ್ಯತೆಯ ಬಗ್ಗೆ ತಮ್ಮ ನಂಬಿಕೆಯನ್ನು ಪ್ರತಿಪಾದಿಸಿದರು. "ಗಾಂಧಿ ಹೇಗೆ ಗಾಂಧಿಯಾಗಿದ್ದರು? ಅವರು ಪ್ರಾಚೀನ 'ಸನಾತನ' ನೀತಿಗಳ ಅರಿತಿದ್ದರು.ಲ್ಲಾ ಧರ್ಮಗಳು ಸಮಾನವೆಂದು ಕಂಡುಕೊಂಡಿದ್ದರು" ರಜಪೂತ್ ಹೇಳಿದರು.