ಬದಿಯಡ್ಕ : ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ಅಧಿಕೃತ ಲಾಂಛನವನ್ನು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ಆಡಳಿತ ಮೊಕ್ತೇಸರರಾದ ಆನೆಮಜಲು ವಿಷ್ಣು ಭಟ್ ನೀರ್ಚಾಲಿನಲ್ಲಿ ಜರಗಿದ `ನೃತ್ಯೋತ್ಸವ 2020 ವೇದಿಕೆಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನೀರ್ಚಾಲು ಎಂಬುದು ಸಂಸ್ಕøತಿಯ ಅಭ್ಯಾಸ ಕೇಂದ್ರವಾಗಿದೆ. 2001ರಲ್ಲಿ ಆರಂಭಗೊಂಡ ಈ ಸಂಸ್ಥೆಯ ಲಾಂಛನವು ಅತಿ ಮನೋಹರವಾಗಿದೆ. ಇದರ ಮೂಲಕ ನೃತ್ಯ, ತಾಳ, ಸಂಗೀತವನ್ನು ಪೋಣಿಸಿದ ಶಾಸ್ತ್ರೀಯ ಕಲೆ ಬಿಂಬಿತವಾಗಿದೆ. ಸಂಸ್ಥೆಯನ್ನು ಗುರುತಿಸುವಲ್ಲಿ ಈ ಲಾಂಛನ ಸಹಕಾರಿಯಾಗಲಿ, ವೈಷ್ಣವೀ ನಾಟ್ಯಾಲಯ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ವಿದುಷಿ ನಯನ ವಿ.ರೈ, ಜಯದೇವ ಖಂಡಿಗೆ, ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್, ಮಹೇಶ್ ವಳಕ್ಕುಂಜ, ಡಾ. ರಾಜೇಶ್ ಬೆಜ್ಜಂಗಳ, ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ನ್ಯಾಯವಾದಿ ಜಯಪ್ರಕಾಶ್ ಪುತ್ತೂರು ಉಪಸ್ಥಿತರಿದ್ದರು.