ಕುಂಬಳೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ದ್ವಿತೀಯ ಸೋಪಾನ ಶಿಬಿರವು ಇತ್ತೀಚೆಗೆ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಜರುಗಿತು.ಇನ್ನೂರ ಮೂರು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ಭಾಗವಹಿಸಿ ಅನುಭವ ಹಂಚಿ ಕೊಂಡರು.
ಶಿಬಿರದ ಮಾರ್ಗದರ್ಶಕರಾಗಿ ಸ್ಕೌಟ್ ವಿಭಾಗದಲ್ಲಿ ಸೂರ್ಯನಾರಾಯಣ ಯಚ್,ಪ್ರಶಾಂತ್ ಕುಮಾರ್,ದಯಾನಂದ ಹಾಗೂ ಗೈಡ್ ವಿಭಾಗದಲ್ಲಿ ಮಹೇಶ್,ಆಶಾಲತಾ,ಪವಿತ್ರ.ಕೆ,ಸುಶೀಲ,ಚಂದ್ರಾವತಿ,ಸಿಸ್ಟರ್ ಅಶ್ವಿನಿ ಸಹಕರಿಸಿದರು.ಜಿಲ್ಲಾ ಸ್ಕೌಟ್ಸ್ ಗೈಡ್ ಸಂಘಟನೆಯ ಪದಾಧಿಕಾರಿಗಳಾದ
ಸಾಬು ಥೋಮಸ್, ಅನಿತಾ ನಾಯರ್ ಹಾಗೂ ಕಿರಣ್ ಪ್ರಸಾದ್ ಕೂಡ್ಲು ಶಿಬಿರ ಸಂದರ್ಶಿಸಿ ಶುಭಕೋರಿದರು.
ಕಾಸರಗೋಡು ಜಿಲ್ಲಾ ಸ್ಕೌಟ್ ಸಂಘಟಕ ವಿಜಯ್ ಕುಮಾರ್ ಕಾಟುಕುಕ್ಕೆ ಶಿಬಿರದ ನೇತೃತ್ವ ವಹಿಸಿದರು.ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ಅಧ್ಯಾಪಕ ರಾಜು ಕಿದೂರು ಹಾಗೂ ಗೈಡ್ಸ್ ಅಧ್ಯಾಪಕಿ ಜಯಶೀಲ,ಶಾಲಾ ಮುಖ್ಯೋಪಾಧ್ಯಾಯಿ ಸಿಸ್ಟರ್ ಪ್ರತಿಭ ಉಪಸ್ಥಿತರಿದ್ದರು.