ಶ್ರೀನಗರ: ಕಳೆದ 6 ತಿಂಗಳುಗಳಿಂದ ಶಾಲೆಗಳಿಂದ ದೂರವೇ ಉಳಿದಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶಾಲೆಗಳು ಪುನಾರಾರಂಭಗೊಂಡಿದೆ.
2019ರ ಆಗಸ್ಟ್ 5 ರಂದು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಭದ್ರತೆಗಾಗಿ ಜಮ್ಮು-ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಂದಿನಿಂದಲೂ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಈ ಬಾರಿ ಶಾಲೆಗಳ ಪುನರಾರಂಭಕ್ಕೆ ಪೆÇೀಷಕರು, ಮಕ್ಕಳು ಹಾಗೂ ಶಿಕ್ಷಕರಿಂದ ಉತ್ತಮ ಹಾಗೂ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಲೆಗಲು ಪುನಾರಂಭ ಆಗುವುದು ನಿಕ್ಕಿ ಎಂದು ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕ ಮೊಹಮ್ಮದ್ ಯೂನಿಸ್ ಮಲೀಕ್ ಹೇಳಿದ್ದಾರೆ.
2020ನೇ ವರ್ಷ ನಮಗೆ ಉತ್ತಮ ವರ್ಷವಾಗಿದೆ ಎಂದು ನಂಬಿದ್ದೇವೆ. ಹೊಸ ವರ್ಷ ಶಾಂತಿಯುತವಾಗಿರಲಿದ್ದು, ಶಿಕ್ಷಣಕ್ಕೆ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂಬ ಭರವಸೆಯನ್ನಿಟ್ಟುಕೊಂಡಿದ್ದೇವೆಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಐರಾ ಎಂಬ ವಿದ್ಯಾರ್ಥಿ ಹೇಳಿದ್ದಾರೆ.