ಮಧೂರು: ಕುಂಬಳೆ ಸೀಮೆಯ ಪ್ರಧಾನ ನಾಲ್ಕು ದೇವಾಲಯಗಳಲ್ಲಿ ಒಂದಾಗಿರುವ, ಮೊದಲ ಪೂಜಿತ ದೇವರಾಗಿ ಪೂಜೆಗೊಳ್ಳುವ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯದ ಪುನರ್ ನವೀಕರಣ ಪ್ರಕ್ರಿಯೆಗಳು ಬೃಹತ್ ಯೋಜನೆಗಳೊಂದಿಗೆ ಅಂತಿಮ ಹಂತದಲ್ಲಿದೆ. ಶ್ರೀಕ್ಷೇತ್ರದ ಸಮಗ್ರ ಚಟುವಟಿಕೆ ಸಹಿತ ಇತರ ವಿಷಯಗಳ ಅವಲೋಕನ, ನಿರ್ದೇಶನ ಹಾಗೂ ಅನುಗ್ರಹಗಳಿಗಾಗಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮಿಗಳು ಮಾ.6 ಹಾಗೂ 7 ರಂದು ಕ್ಷೇತ್ರಕ್ಕೆ ಆಗಮಿಸುವರು. ಕಾರ್ಯಕ್ರಮದ ಅಂಗವಾಗಿ ಇಂದು(ಭಾನುವಾರ) ಸಂಜೆ 7ಕ್ಕೆ ಪೂರ್ವಭಾವೀ ಅವಲೋಕನ ಸಭೆ ಶ್ರೀಕ್ಷೇತ್ರ ಕಲ್ಯಾಣಮಂಟಪದಲ್ಲಿ ನಡೆಯಲಿದೆ. ಭಕ್ತಜನರು ಹೆಚ್ಜಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.
ಶೃಂಗೇರಿ ಜಗದ್ಗುರುಗಳ ಮಧೂರು ಭೇಟಿ-ಪೂರ್ವಭಾವೀ ಸಭೆ ಇಂದು
0
ಫೆಬ್ರವರಿ 16, 2020