ಕಾಸರಗೋಡು: ಕಾವಿಲ್ ಭಂಡಾರವೀಡು ತರವಾಡಿನಲ್ಲಿ ಮೇ 13 ರಿಂದ 17 ರ ವರೆಗೆ ನಡೆಯುವ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕೆಟ್ಟು ಮಹೋತ್ಸವದ ಅಂಗವಾಗಿ ಕೊಯ್ಲು ಉತ್ಸವವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ರವಿವಾರ ಉದ್ಘಾಟಿಸಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಿವಿಧ ಕಳಗ ಕ್ಷೇತ್ರ ಪದಾ„ಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭತ್ತ ಬೆಳೆದ ಅಚ್ಯುತ್ತನ್ ಪಡಿಂಙõÁರ್ ಅವರನ್ನು ಗೌರವಿಸಲಾಯಿತು. ತೆಯ್ಯಂಕೆಟ್ಟು ಮಹೋತ್ಸವ ಸಮಿತಿ ಚೆಯರ್‍ಮೇನ್ ರಾಜನ್ ಪೆರಿಯ, ಪ್ರಧಾನ ಕಾರ್ಯದರ್ಶಿ ದಿವಾಕರನ್ ಕಾವುಗೋಳಿ, ಕಾರ್ಯಾಧ್ಯಕ್ಷ ಪದ್ಮನಾಭನ್ ಬಿ. ಮೊದಲಾದವರು ಮಾತನಾಡಿದರು. ವಿವಿಧ ಕ್ಷೇತ್ರ ಆಚಾರ ಸ್ಥಾನಿಕರು ಉಪಸ್ಥಿತರಿದ್ದರು.