ಕಾಸರಗೋಡು: ಸಮನ್ವಯ ಕಲೋತ್ಸವ ಸಮಾರೋಪದಂಗವಾಗಿ ಕಾಸರಗೋಡು ವ್ಯಾಪಾರ ಭವನ್‍ನ ಸಭಾಂಗಣದಲ್ಲಿ ಜರಗಿದ ಪೌರತ್ವ ಸಮಾವೇಶ ವಿಚಾರಗೋಷ್ಠಿಯನ್ನು ಕೇರಳ ತುಳು ಅಕಾಡೆಮಿಯ ಸದಸ್ಯೆ ಸಚಿತಾ ರೈ ಟೀಚರ್ ಪೆರ್ಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದಾಮೋದರ ಮೊಗ್ರಾಲ್‍ಪುತ್ತೂರು ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಎಫ್‍ಐ ನೇತಾರ ಸವಾದ್ ನಾಯಮ್ಮಾರಮೂಲೆ, ಕೇರಳ ಕಾಂಗ್ರೆಸ್(ಬಿ) ನೇತಾರ ಹಮೀದ್ ಮುಳಿಯಾರು, ಆಮು ಅಡ್ಕಸ್ಥಳ, ನಿವೃತ್ತ ಸಿ.ಪಿ.ಸಿ.ಆರ್.ಐ. ಉದ್ಯೋಗಿ ಅಮ್ಮು ಪೂಜಾರಿ, ನಾರಾಯಣ ಎಡಚೇರಿ, ಕೆ.ಟಿ.ವಿಜಯನ್, ಹರಿಣಾಕ್ಷಿ ವಿ. ಭಾಗವಹಿಸಿ ಮಾತನಾಡಿದರು. ನಾಗೇಶ್ ಶೆಣೈ ಸ್ವಾಗತಿಸಿ, ಹಮೀದ್ ಪುದುಮಣ್ ವಂದಿಸಿದರು.
ವಿವಿಧ ಕಲಾ ಸಾಹಿತ್ಯ ಸ್ಪರ್ಧೆಗಳು ಜರಗಿತು. ನ್ಯಾಯವಾದಿ ತೋಮಸ್ ಡಿ'ಸೋಜ, ದಿಲೀಪ್ ಪೆರ್ಲ, ಆಮು ಅಡ್ಕಸ್ಥಳ, ಹಮೀದ್ ಪುದುಮಣ್, ನಾಗೇಶ್ ಶೆಣೈ, ಹರಿಣಾಕ್ಷಿ ವಿ, ಸಂತೋಷ್ ಬಂದ್ಯೋಡು, ಸಚಿತಾ ರೈ, ಸುಕನ್ಯಾ ಟೀಚರ್, ಸುರೇಂದ್ರ ಕೊಳ್ಕೆಬೈಲು ಸಹಕರಿಸಿದರು.