ತಿರುವನಂತಪುರಂ: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇನ್ನೂ 3 ಸಾವಿರ ಜನರು ವೈದ್ಯಕೀಯ ಅಬ್ಸರ್ವೆಷನಲ್ಲಿದ್ದರೂ ಕಳೆದ ಕೆಲ ದಿನಗಳಿಂದ ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ರಾಜ್ಯ ವಿಪತ್ತು ಎಚ್ಚರಿಕೆ ಘೋಷಣೆಯನ್ನು ಹಿಂಪಡೆದುಕೊಂಡಿದೆ.
ಕೇರಳ ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ 61 ಜನರು ಇರುವುದಾಗಿ ಆರೋಗ್ಯ ಸಚಿವೆ ಕೆಕೆ ಶೈಲಾಜ ತಿಳಿಸಿದ್ದಾರೆ.ಕೇರಳದ ತ್ರಿಶೂರ್, ಅಲಾಪ್ಪುಜಾ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮೂವರಲ್ಲಿ ಕೊರೋನಾ ವೈಸರ್ ಪಾಸಿಟಿವ್ ವರದಿಯಾಗಿತ್ತು. ಇವೆರಲ್ಲರೂ ಕೇರಳದ ವಿದ್ಯಾರ್ಥಿಯಾಗಿದ್ದಾರೆ. ಈ ಪೈಕಿ ಇಬ್ಬರು ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಮೂವರು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಫೆ. 3 ರಂದು ರಾಜ್ಯ ವಿಪತ್ತು ಘೋಷಣೆ ಮಾಡಲಾಗಿತ್ತು.