HEALTH TIPS

ಪೆರ್ಲ ನಾಲಂದ ಕಾಲೇಜು-ಬೃಹತ್ 'ಕೃಷಿ ಮೇಳ' ನಾಳೆ

     
        ಪೆರ್ಲ:ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ.ಸಮಗ್ರ ಕೃಷಿ ಕಾಯಕಗಳಿಗೆ ಪೂರಕವಾದ ಯಂತ್ರೋಪಕರಣಗಳ ಹೊಸ ಆವಿಷ್ಕಾರಗಳು ನಡೆದಲ್ಲಿ ಯುವಕರು ಕೃಷಿ ಕಾಯಕದತ್ತ ಮರಳುವ ಸಾಧ್ಯತೆ ಇದೆ ಎಂದು ನಾಲಂದಾ ಕಾಲೇಜು ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ ತಿಳಿಸಿದರು.
      ಪೆರ್ಲ ನಾಲಂದ ಮಹಾವಿದ್ಯಾಲಯ, ಕ್ಯಾಂಪೆÇ್ಕೀ ಲಿಮಿಟೆಡ್, ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಫೆ.8ರಂದು ಕಾಲೇಜು ಆವರಣದಲ್ಲಿ ನಡೆಯಲಿರುವ 'ಕೃಷಿ ಮೇಳ'ದ ಬಗ್ಗೆ ಸ್ಥಳೀಯ  ಪತ್ರಕರ್ತರಿಗೆ ಮಾಹಿತಿ ನೀಡಿ ಮಾತನಾಡಿದರು.
      ಪೆರ್ಲ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಕೃಷಿಕರಿದ್ದರೂ ದೊಟ್ಟ ಮಟ್ಟಿನ ಕೃಷಿ ಮೇಳಗಳು ಈವರೆಗೆ ನಡೆದಿಲ್ಲ.ಯುವಕರಿಗೆ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ, ಸಾವಯವ ಕೃಷಿಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಬೃಹತ್ ಕೃಷಿ ಮೇಳದಲ್ಲಿ ವಿಚಾರ ಗೋಷ್ಠಿ ಆಯೋಜಿಸಲಾಗಿದೆ.ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೊಸ ಆವಿಷ್ಕಾರಗಳು ರೂಪು ಗೊಳ್ಳುವಲ್ಲಿ, ಬೇಡಿಕೆಗೆ ಅನುಸರಿಸಿ ಯಂತ್ರೋಪಕರಣಗಳ ಆವಿಷ್ಕಾರದಲ್ಲಿ ಮಾರ್ಪಾಡು ತರಲು ಸಲಹೆ ಸೂಚನೆ ನೀಡಬೇಕು.ಕೃಷಿ, ಹೈನುಗಾರಿಕೆ, ಇನ್ನಿತರ ಅಬಾಲವೃದ್ಧರು ಉಪಯೋಗಿಸಬಹುದಾದ ವಿವಿಧ ರೀತಿಯ ಯಂತ್ರೋಪಕರಣ ಆವಿಷ್ಕಾರಗಳ ಪ್ರದರ್ಶನ, ಮಾರಾಟ, ಬೀಜಗಳು, ನರ್ಸರಿ ಗಿಡಗಳು, ಕೃಷಿ ಉತ್ಮನ್ನಗಳು, ತಿಂಡಿ, ತಿನಸು, ಪುಸ್ತಕ ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಉತ್ತಮ ರೀತಿಯಲ್ಲಿ ನೀರಿಂಗಿಸುವ ಮೂಲಕ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿಕರಿಗೆ ಸನ್ಮಾನ ಹಾಗೂ ಉತ್ತಮ ಕೃಷಿ ಉತ್ಪನ್ನಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
     ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಕಾಲೇಜು ಆಡಳಿತ ಮಂಡಳಿ ಸದಸ್ಯ ಶಶಿಭೂಷಣ ಶಾಸ್ತ್ರಿ ಮಾತನಾಡಿ, ಕೆಲಸದ ಆಳುಗಳ ಕೊರತೆ ಸಮಗ್ರ ಕೃಷಿ ಕ್ಷೇತ್ರವನ್ನು ಬಾಧಿಸುತ್ತಿದ್ದು ಆ ನಿಟ್ಟಿನಲ್ಲಿ ನೆಲದಿಂದಲೆ ಔಷಧಿ ಸಿಂಪಡಿಸುವ, ಇತರ ಸರಳ ಯಂತ್ರಗಳ ಪ್ರದರ್ಶನ ನಡೆಯಲಿದ್ದು ಕೃಷಿಕರು ಕೃಷಿ ಮೇಳದ ಸದುಪಯೋಗ ಪಡೆಯುವಂತೆ ವಿನಂತಿಸಿದರು.
      ಕನ್ನಡ ಉಪನ್ಯಾಸಕ, ಸಿಬ್ಬಂದಿ ಕಾರ್ಯದರ್ಶಿ ಕೇಶವ ಶರ್ಮ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ವಯಸ್ಕರೇ ದುಡಿಯುತ್ತಿದ್ದಾರೆ.ಕೃಷಿ ಯಂತ್ರೋಪಕರಣಗಳ ಮಾಹಿತಿ, ಉಪಯೋಗಿಸುವ ರೀತಿಯನ್ನು ಕರಗತ ಮಾಡಿಕೊಂಡಲ್ಲಿ ಯುವಕರು ಕೃಷಿ ಕ್ಷೇತ್ರದತ್ತ ಮುಖ ಮಾಡುವರು ಎಂದರು.ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries