HEALTH TIPS

ಕನ್ನಡ ಸಿರಿ ಸಮ್ಮೇಳನ-ಸರ್ವಾಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ಅಬುದಾಬಿ ಆಯ್ಕೆ

            ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡ ಭಾಷಾ ಸoಸ್ಕøತಿಯ ಅಸ್ಮಿತೆಯ ಸಂಕೇತವಾಗಿ ಏ.10 ರಿಂದ 12ರ ವರೆಗೆ ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುವ ಕನ್ನಡ ಸರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಸಾಹಿತ್ತಿ, ಸಾಂಸ್ಕøತಿಕ ಸಂಘಟಕ ಅಬುದಾಬಿಯಲ್ಲಿ ಉದ್ಯಮಿಯಾಗಿರುವ ಸರ್ವೋತ್ತಮ ಶೆಟ್ಟಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಿರಿ ಸಮ್ಮೇಳನದ ಅಧ್ಯಕ್ಷ ರಾಂ ಪ್ರಸಾದ್ ಕಾಸರಗೋಡು ಅವರು ಘೋಶಿಸಿದರು.
         ಈ ಬಗ್ಗೆ ಭಾನುವಾರ ಕುಂಬಳೆಯ ಮಾಧವ ಪೈ ಸಭಾಂಗಣದಲ್ಲಿ ನಡೆದ ಕೇಂದ್ರ ಸಮಿತಿಯ ಮಹತ್ವದ ಸಭೆಯಲ್ಲಿ ಅವರು ಘೋಶಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಸಿರಿ ಸಮ್ಮೇಳನದ ಕಾರ್ಯಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಉಪಸ್ಥಿತರಿದ್ದು ಮಾತನಾಡಿ ಸಮ್ಮೇಳನದ ಸಮಗ್ರ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ವಿವಿಧ ವಲಯಗಳ ಪ್ರಮುಖರಾದ ಡಾ.ರಾಜೇಶ್ ಆಳ್ವ ಬದಿಯಡ್ಕ, ಪ್ರೊ.ಎ.ಶ್ರೀನಾಥ್, ಪ್ರದೀಪ್ ಶೆಟ್ಟಿ ಬೇಳ, ಸುಂದರ ಬಾರಡ್ಕ, ಲಕ್ಷ್ಮಣ ಪ್ರಭು ಕುಂಬಳೆ, ಸುರೇಶ್ ಶಾಂತಿಪಳ್ಳ, ಬಿ.ಸುಬ್ರಹ್ಮಣ್ಯ ನಾಯಕ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
       ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ನಿರ್ವಹಿಸಿದರು. ರವಿ ನಾಯ್ಕಾಪು ಸ್ವಾಗತಿಸಿ, ನವೀನಚಂದ್ರ ಮಾಸ್ತರ್ ಮಾನ್ಯ ವಂದಿಸಿದರು.
        ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ಮಾ.1 ರಂದು ಬೆಳಿಗ್ಗೆ 10ಕ್ಕೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ಮಹಿಳಾ ಸಮಿತಿಯ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಅದೇ ದಿನ ಸಂಜೆ 4ಕ್ಕೆ ಅನಂತಪುರ ಶ್ರೀಕ್ಷೇತ್ರ ಪರಿಸರದ ಸಭಾಂಗಣದಲ್ಲಿ ಸ್ಥಳೀಯ ಸಂಘಸಂಸ್ಥೆಗಳು, ಸ್ವಸಹಾಯ ಸಂಘಗಳು, ಕುಟುಂಬಶ್ರೀ ಸದಸ್ಯರ ವಿಶೇಷ ಸಭೆಯನ್ನೂ ನಡೆಸಲು ತೀರ್ಮಾನಿಸಲಾಯಿತು. ಸಮ್ಮೇಳನದ ವಿಶೇಷ ಪ್ರಸ್ತುತಿಯಾಗಿರುವ ಕವಿ ಮಂಟಪ ಕಾರ್ಯಕ್ರಮದ ಪೂರ್ವಭಾವೀ ಸಭೆ ಫೆ.29 ರಂದು ಅಪರಾಹ್ನ 2 ಕ್ಕೆ ಕುಂಬಳೆಯ ಮಾಧವ ಪೈ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಸಂಬಂಧಪಟ್ಟವರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries