ಬದಿಯಡ್ಕ: ದಶಮಾನೋತ್ಸವದ ಸಂಭ್ರಮದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಕಲಾವಿದರಿಂದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಂಗವಾಗಿ ಯಕ್ಷಗಾನ ಬಯಲಾಟ ನಡೆಯಿತು.
ಸವ್ಯಸಾಚಿ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಚಕ್ರವರ್ತಿ ದಶರಥ ಹಾಗೂ ಸುಧನ್ವ ಮೋಕ್ಷ ಪ್ರಸಂಗದ ಪ್ರದರ್ಶನ ನಡೆಯಿತು. ದಶರಥನಾಗಿ ವರ್ಷಾಲಕ್ಷ್ಮಣ್, ಕೈಕೆಯಾಗಿ ಮೇಘನಾ, ಶನಿಯಾಗಿ ಅಭಿಜ್ಞಾ ಭಟ್, ಶಂಬರಾಸುರನಾಗಿ ಮನ್ವಿತ್‍ಕೃಷ್ಣ ನಾರಾಯಣಮಂಗಲ, ವ್ಯಾಘ್ರಾಸುರನಾಗಿ ಮನೀಷ್ ರೈ ವಳಮಲೆ, ಚಂಡಾಸುರನಾಗಿ ಶರತ್ ಅಮ್ಮಣ್ಣಾಯ, ಬಿಡಲಾಸುರನಾಗಿ ಆಯುಷ್ ಲಕ್ಷ್ಮಣ್, ಅರ್ಜುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ನೀಲಧ್ವಜನಾಗಿ ಮನಸ್ವಿನಿ ಎನ್, ವೃಷಕೇತುವಾಗಿ ನಂದಕಿಶೋರ್ ಮವ್ವಾರು, ಪ್ರದ್ಯುಮ್ನನಾಗಿ ಅಭಿಜ್ಞಾ ಭಟ್, ಅನುಸಾಲ್ವನಾಗಿ ಹರ್ಷಪ್ರಸಾದ್ ಪುತ್ತಿಗೆ, ಹಂಸಧ್ವಜನಾಗಿ ಪ್ರಭಾವತಿ ಕೆದಿಲಾಯ ಪುಂಡೂರು, ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಸುಪ್ರೀತಾ ಸು„ೀರ್ ಮುಳ್ಳೇರಿಯ, ಶ್ರೀಕೃಷ್ಣ್ಣನಾಗಿ ಅಮಿತಾ ಪೆÇಳಲಿ ಪಾತ್ರಗಳಲ್ಲಿ ಪ್ರಬುದ್ಧತೆ ಮೆರೆದರು. ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ಚಕ್ರತಾಳದಲ್ಲಿ ಗೋವಿಂದ ಭಟ್ ಬೇಂದ್ರೋಡು ಹಾಗೂ ರವಿರಾಜ್ ಹಿಮ್ಮೇಳ ನೀಡಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ, ರಾಜೇಶ್, ರಾಜೇಂದ್ರ ಹಾಗೂ ಗಿರೀಶ್ ಸಹಕರಿಸಿದರು.