HEALTH TIPS

ಬದಿಯಡ್ಕದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಸಮಾವೇಶ


      ಬದಿಯಡ್ಕ: ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಬೆಂಬಲಿಸಿ ಶನಿವಾರ ಸಂಜೆ ಬದಿಯಡ್ಕ ಬಸ್ ನಿಲ್ದಾಣದ ಪರಿಸರದಲ್ಲಿ ರಾಷ್ಟ್ರ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸಮರ್ಥನಾ ಸಮಾವೇಶ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯವಾಹ ಶಿವಶಂಕರ ಭಟ್ ಗುಣಾಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
       ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಎಂ.ಬಿ. ಬಾನುಪ್ರಕಾಶ್ ಮುಖ್ಯ ಭಾಷಣಕಾರರಾಗಿ ಕವಿ ಕಯ್ಯಾರರನ್ನು ನೆನಪಿಸಿ ಮಾತನಾಡಿ,  1947ರಿಂದ ಭಾರತದಲ್ಲಿ ನೆಲೆಸಿರುವ ಮುಸಲ್ಮಾನರ ಸಹಿತ ಎಲ್ಲರಿಗೂ ಪೌರತ್ವವನ್ನು ನೀಡುವ ಕಾನೂನನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ, ದೇಶವನ್ನಾಳುವ ನರೇಂದ್ರ ಮೋದಿ ನೇತೃತ್ವದ ಸರಕಾರ ಜ್ಯಾರಿಗೆ ತಂದಿದೆ. ಪೌರತ್ವ ತಿದ್ದುಪಡಿ ಕಾಯಿದೆಯು ಯಾರದೇ ಪೌರತ್ವನ್ನು ಕಿತ್ತುಕೊಳ್ಳುವ ಕಾನೂನು ಅಲ್ಲ ಎಂಬುದನ್ನು ಜನತೆ ತಿಳಿಯಬೇಕು. ವೈಚಾರಿಕ ಸಿದ್ಧಾಂತವೇ ಇಲ್ಲದ ಕಾಂಗ್ರೆಸ್ ಪಕ್ಷವು ಇಂದು ಅಧಿಕಾರಕ್ಕಾಗಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಎಡರಂಗದೊಂದಿಗೆ ಕೈಜೋಡಿಸುವ ಪರಿಸ್ಥಿತಿ ಎದುರಾಗಿದೆ. ಹಿಂದಿನಿಂದ ಕತ್ತಿಹಾಕುವ ಜಾಯಮಾನದವರು ಹಿಂದುಗಳಲ್ಲ. 370ನೇ ವಿಧಿಯನ್ನು ತೆಗೆದು ಹಾಕಿದರೂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹೊರಟಿದ್ದರೂ ಭಾರತದಲ್ಲಿ ಯಾವುದೇ ಮತೀಯ ಸಂಘರ್ಷ ನಡೆದಿಲ್ಲ. ಭಾರತದ ಸಂವಿಧಾನದ ಪ್ರಕಾರ ಇಲ್ಲಿ ಆಡಳಿತ ನಡೆಯುತ್ತಿದೆ. ಅನಾದಿ ಕಾಲದಿಂದ ಈ ದೇಶವು ಎಲ್ಲರನ್ನೂ ಸ್ವಾಗತ ಮಾಡಿದೆ. ಆದರೆ ಅಮೂಲ್ಯವಾದ ಹೆಸರನ್ನಿಟ್ಟುಕೊಂಡು ಭಾರತ ವಿರೋಧಿ ಘೋಷಣೆಯನ್ನು ಕೂಗುವವರಿಗೆ ಇಲ್ಲಿ ಜಾಗವಿಲ್ಲ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದ ಅವರು ದೇಶಕ್ಕೆ ನೆಮ್ಮದಿಯನ್ನು ನೀಡಲು ಮೋದಿ ಸರಕಾರದ ಕಾನೂನು ಈ ದೇಶದ ಎಲ್ಲರಿಗೂ ಬಾಧಕವಾಗಿದೆ ಎಂದರು.
       ಹಿಂದೂ ಐಕ್ಯವೇದಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಖರ ವಾಗ್ಮಿ ಕೆ.ಪಿ.ಹರಿದಾಸ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೇರಳದ ಮಣ್ಣಿನಲ್ಲಿ ಎಲ್ಲೆಡೆ ತಮ್ಮ ಅಂಗಡಿಗಳನ್ನು ಮುಚ್ಚುತ್ತಿರುವುದು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ದೇಶೀಯ ಪೌರತ್ವ ನಿಯಮವನ್ನು ಬೆಂಬಲಿಸುವ ಯಾರೂ ನಮ್ಮ ಅಂಗಡಿಗೆ ವ್ಯಾಪಾರಕ್ಕೆ ಬರುವುದು ಬೇಡ ಎಂಬ ನಾಮಫಲಕದೊಂದಿಗೆ ಅಂಗಡಿಗಳನ್ನು ತೆರೆಯುವ ಧೈರ್ಯ ಯಾರಿಗಿದೆ ಎಂಬ ಸವಾಲವನ್ನೆಸೆದರು.
        ಭಾರತದಲ್ಲಿ ಜೀವಿಸುತ್ತಿರುವ 130.07 ಕೋಟಿ ಜನರಿಗೆ ಯಾವ ರೀತಿಯಲ್ಲೂ ಬಾಧಿಸದ ನಿಯಮವಿದೆಂಬುದನ್ನು ಅರಿಯುವ ಬುದ್ಧಿಯಿಲ್ಲದವರು ಇಂದು ಹೋರಾಟಕ್ಕೆ ಇಳಿದಿದ್ದಾರೆ. ಇದು ಮುಸ್ಲಿಂ ಸಮೂಹಕ್ಕೆ ಎದುರಾದ ವೇದಿಕೆಯಲ್ಲ. ಮುಸ್ಲಿಂ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಿಂದ ಮತೀಯ ಪೀಡನೆಗೊಳಗಾಗಿ ಭಾರತಕ್ಕೆ ಆಗಮಿಸುವ ಅಲ್ಪಸಂಖ್ಯಾತರಿಗಾಗಿರುವ ನಿಯಮ ಇದಾಗಿದೆ. 3 ದೇಶಗಳ ಅಲ್ಪಸಂಖ್ಯಾತರುಗಳಾದ ಹಿಂದೂ, ಪಾರ್ಸಿ, ಸಿಖ್, ಜೈನರು, ಬುದ್ದರು, ಕ್ರಿಶ್ಚಿಯನ್ ವಿಭಾಗದವರಿಗಾಗಿರುವ ನಿಯಮವಿದಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗದ ಮುಸ್ಲಿಂ ಸಮುದಾಯದವರು ಇಂದು ಪ್ರತಿಭಟಿಸುತ್ತಿದ್ದಾರೆ ಎಂದರು.
        ನೇತಾರರಾದ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ವಾಮನ ಆಚಾರ್ಯ ಬೋವಿಕ್ಕಾನ, ಗೋಪಾಲ ಚೆಟ್ಟಿಯಾರ್ ಪೆರ್ಲ, ಸತ್ಯಶಂಕರ ಭಟ್ ಕುಂಬಳೆ, ಮಣಿಕಂಠ ರೈ, ಶಿವಕೃಷ್ಣ ಭಟ್, ಮೈರ್ಕಳ ನಾರಾಯಣ ಭಟ್, ಪುಷ್ಪಾ ಅಮೆಕ್ಕಳ, ಬಾಲಕೃಷ್ಣ ಶೆಟ್ಟಿ ಕಡಾರು, ಎಂ.ಸುಧಾಮ ಗೋಸಾಡ, ಕೃಷ್ಣ ಮಣಿಯಾಣಿ ಮೊಳೆಯಾರು, ಸುನಿಲ್ ಪಿ.ಆರ್., ಅವಿನಾಶ್ ರೈ, ಶ್ರೀಧರ ಬೆಳ್ಳೂರು, ಸುಮಿತ್ ರಾಜ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ನಾರಂಪಾಡಿ ಸ್ವಾಗತಿಸಿದರು. ಸಭಾಕಾರ್ಯಕ್ಕೂ ಮೊದಲು ಬದಿಯಡ್ಕ ಬೋಳುಕಟ್ಟೆಯಿಂದ ಮೆರವಣಿಗೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries