ಬದಿಯಡ್ಕ: ಮಾರ್ಚ್ 20ರಿಂದ ಮಾ.28ರ ತನಕ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯು ಭಾನುವಾರ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೌರೀಶಂಕರ ರೈ ಅಧ್ಯಕ್ಷತೆಯನ್ನು ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಏವುಂಜೆ ಶ್ಯಾಮ ಭಟ್, ಪುದುಕೋಳಿ ಶ್ರೀಕೃಷ್ಣ ಭಟ್, ಪೆರ್ವ ಕೃಷ್ಣ ಭಟ್, ಶಶಿರಾಜ ನೀಲಂಗಳ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರ.ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಪ್ರ.ಕಾರ್ಯದರ್ಶಿ ಮಹೇಶ್ ಪಡಿಯಡ್ಪು ವಂದಿಸಿದರು.
ಕುಕ್ಕಂಗೋಡ್ಲು ಬ್ರಹ್ಮಕಲಶೋತ್ಸವ ಸಮಿತಿಯ ಸಭೆ
0
ಫೆಬ್ರವರಿ 03, 2020