HEALTH TIPS

ಪಾರ್ತಿಸುಬ್ಬ ಬದುಕು-ಬರಹ ದ್ವಿದಿನ ವಿಚಾರ ಸಂಕಿರಣ ಉದ್ಘಾಟನೆ:ಪಾರ್ತಿಸುಬ್ಬನ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು - ಡಾ.ಚಿನ್ನಪ್ಪ ಗೌಡ


      ಕುಂಬಳೆ: ಯಕ್ಷಗಾನ ಕಲೆಯು ಸಮಗ್ರ  ಕಲೆಯೆಂಬ ಮಾನ್ಯತೆಯನ್ನು ಪಡೆದಿದ್ದು, ಈ ಕಲೆಯ ಹಿರಿದಾದ ಗುಣಕ್ಕೆ ಕಳಶವಿಟ್ಟವನು ಪಾರ್ತಿಸುಬ್ಬ. ಪಾರ್ತಿಸುಬ್ಬನ ಬಗ್ಗೆ ಆಳವಾದ ಅಧ್ಯಯನಗಳಿಗೆ ಸಾಕಷ್ಟು ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಮಹತ್ವಪೂರ್ಣವಾದ ಕೆಲಸ ಕಾರ್ಯಗಳು ನಡೆಯಬೇಕು ಎಂದು ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
        ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಈ ಸಂಸ್ಥೆಗಳ ಸಹಯೋಗದೊಂದಿಗೆ ಕಾಸರಗೋಡಿನ ಚಾಲಾ ವಿದ್ಯಾ ಸಂಸ್ಥೆಯಲ್ಲಿ ನಡೆದ ಎರಡು ದಿನಗಳ ಪಾರ್ತಿಸುಬ್ಬ ಬದುಕು ಬರಹ ವಿಚಾರಗೋಷ್ಠಿಯನ್ನು ಗುರುವಾರ ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡಿದರು.
     ದಿಕ್ಸೂಚಿ ಭಾಷಣ ಮಾಡಿದ ವಿದ್ವಾಂಸ ಡಾ ಪ್ರಭಾಕರ ಜೋಶಿ ಮಾತನಾಡಿ, ಪಾರ್ತಿಸುಬ್ಬನ ಮರು ಅಧ್ಯಯನ ನಡೆಯಬೇಕಾಗಿದೆ. ಪಾರ್ತಿಸುಬ್ಬನ ಪ್ರಸಂಗ ಸಾಹಿತ್ಯದಲ್ಲಿ ಬರುವ ಪದಗಳ ಸೊಗಸು ವಿಶಿಷ್ಟವಾದುದು ಮಾತ್ರವಲ್ಲ ಪಾರ್ತಿಸುಬ್ಬನ ಸರಳ ಪದಗಪ್ರಯೋಗಗಳು, ನುಡಿಗಟ್ಟುಗಳು ಸನ್ನಿವೇಶವನ್ನು ಸಮರ್ಪಕವಾಗಿ ಸೃಷ್ಟಿಸುತ್ತದೆ ಎಂದು ನುಡಿದರು.
        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ. ಎಂ.ಎ ಹೆಗಡೆ ವಹಿಸಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಲ್. ಅನಂತಪದ್ಮನಾಭ, ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಇದರ ಮಾಜಿ ಅಧ್ಯಕ್ಷ ಜಯರಾಮ ಎಡನೀರು, ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ. ರತ್ನಾಕರ ಮಲ್ಲಮೂಲೆ ಶುಭ ಹಾರೈಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್ ಎಚ್ ಶಿವರುದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ವಂದಿಸಿದರು. ಅಕಾಡೆಮಿ ಸದಸ್ಯ ರಾಧಾಕೃಷ್ಣ ಕಲ್ಚಾರ್ ಉಪಸ್ಥಿತರಿದ್ದರು.  ಎಂಫಿಲ್ ವಿದ್ಯಾರ್ಥಿನಿ ಸುಜಾತಾ ಸಿ.ಎಚ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸುಜಾತಾ ಎನ್ ನಿರೂಪಿಸಿದರು.
      ಪಾರ್ತಿಸುಬ್ಬನ ಕಾಲ ಹಾಗೂ ಕರ್ತತ್ವ ಚರ್ಚೆಗಳು, ಪಾರ್ತಿಸುಬ್ಬನ ಬಗೆಗಿನ ಅಧ್ಯಯನಗಳು ಹಾಗೂ ಕೃತಿ ಪ್ರಕಟಣೆಗಳು, ಪಾರ್ತಿಸುಬ್ಬನ ಪದಪ್ರಯೋಗ ವೈಶಿಷ್ಟ್ಯಗಳು, ಪಾರ್ತಿಸುಬ್ಬನ ಇತಿಹಾಸ ಹಾಗೂ ಐತಿಹ್ಯಗಳು, ಪಾರ್ತಿಸುಬ್ಬನ ಕೃತಿಪರಿಚಯ, ಪಾರ್ತಿಸುಬ್ಬನ ಮಟ್ಟುಗಳು, ರಾಮಾಯಣ ಪ್ರಸಂಗಗಳು, ಈ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಚರ್ಚೆ ಮತ್ತು ದಾಖಲಾತಿ ನಡೆಯಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries