ಕಾಸರಗೋಡು: ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ಏರ್ಪಡಿಸಲಾಗಿರುವ ಲಿಫ್ಟ್ ವ್ಯವಸ್ಥೆ ಚಟುವಟಿಕೆ ಆರಂಭಿಸಿದೆ. ಸುಮಾರು 50ಲಕ್ಷ ರೂ. ವಎಚ್ಚದಲ್ಲಿ ಲಿಫ್ಟ್ ಅಳವಡಿಸಲಾಗಿದ್ದು, ವೃದ್ಧರು, ಅಸೌಖ್ಯಪೀಡಿತರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಲಭಿಸಿದೆ.
ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಲಿಫ್ಟ್ ಕೆಲವು ದಿವಸಗಳ ಹಿಂದೆಯೇ ಚಟುವಟಿಕೆ ಆರಂಭಿಸಿದೆ. ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ವ್ಯವಸ್ಥೆ ಏರ್ಪಡಿಸುವಂತೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಕೇಳಿ ಬರುತ್ತಿದ್ದರೂ, ಇತ್ತೀಚೆಗಷ್ಟೆ ವ್ಯವಸ್ಥೆ ಜಾರಿಗೆ ಬಂದಿದೆ. ಇದಾದ ಕೆಲವೇ ದಿವಸಗಳಲ್ಲಿ ಕಾಞಂಗಾಡು ರೈಲ್ವೆ ನಿಲ್ದಾಣಕ್ಕೆ ಲಿಫ್ಟ್ ಮಂಜೂರಾಗಿ ಲಭಿಸಿದೆ. ಏಕ ಕಾಲಕ್ಕೆ 13ಮಂದಿ ಪ್ರಯಾಣಿಕರಿಗೆ ಲಿಫ್ಟ್ ಮೂಲಕ ಸಂಚರಿಸಬಹುದಾಗಿದೆ. ಒಂದು ಫ್ಲ್ಯಾಟ್‍ಫಾರ್ಮ್‍ನಿಂದ ಇನ್ನೊಂದೆಡೆಗೆ ಸಾಗಲು ಲಿಫ್ಟ್ ಅಳವಡಿಸಲಾಗಿದೆ. ಅಸೌಖ್ಯಪೀಡಿತರನ್ನು ಕರೆದೊಯ್ಯಲು ಗಾಲಿಕುರ್ಚಿಯನ್ನಿರಿಸಿ ಸಂಚಾರ ನಡೆಸುವ ವ್ಯವಸ್ಥೆಯೊಂದಿಗೆ ವಿಶಾಲ ಜಾಗ ಹೊಂದಿರುವ ಲಿಫ್ಟ್ ವ್ಯವಸ್ಥೆ ಇದಾಗಿದೆ.