ಕುಂಬಳೆ: ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿದ ಭೋಜನ ಶಾಲೆ ಹಾಗೂ ಸಭಾಭವನದ ವಿಜ್ಞಾಪನಾ ಪತ್ರವನ್ನು ಇತ್ತೀಚೆಗೆ ಎಡನಾಡು ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಶ್ರೀಗುರುಗಳ ವಿದ್ಯಾಕ್ಷೇತ್ರದಲ್ಲಿ ಒಂದು ಸದುದ್ದೇಶಕ್ಕಾಗಿ ನಾವೆಲ್ಲ ಒಗ್ಗಟ್ಟಿನಿಂದ ಕಾರ್ಯಕ್ಕೆ ಇಳಿದಲ್ಲಿ ಅತೀ ಶೀಘ್ರದಲ್ಲಿ ಸಫಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಶಾಲಾ ಆಡಳಿತಾಧಿಕಾರಿ ಶ್ಯಾಂ ಭಟ್ ದರ್ಭೆಮಾರ್ಗ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್. ಮುನ್ನಿಪ್ಪಾಡಿ, ಕೋಶಾಧಿಕಾರಿ ಎಯ್ಯೂರು ಚಂದ್ರಶೇಖರ ಭಟ್, ದರ್ಭಾರುಕಟ್ಟೆ ರಾಜರಾಜೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ ಆಳ್ವ, ವಿದ್ಯಾಲಯದ ಮುಖ್ಯ ಶಿಕ್ಷಕಿ, ಚಿತ್ರಾಸರಸ್ವತಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕಿ ವಿದ್ಯಾ ಸ್ವಾಗತಿಸಿ,ಪ್ರತೀಕ್ಷಾ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ನಿರೂಪಿಸಿದರು.