ಕಾಸರಗೋಡು: ಆದ್ರ್ರಂ ಜನಪರ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ಆಹಾರ ಸುರಕ್ಷಾ ಇಲಾಖೆಯ ನೇತೃತ್ವದಲ್ಲಿ ಆರೋಗ್ಯದಾಯಕ ಆಹಾರ ಸೇವಿಸಿ ಎಂಬ ಸಂದೇಶದೊಂದಿಗೆ ರ್ಯಾಲಿ ನಡೆಸಲಾಯಿತು.
ರ್ಯಾಲಿಯನ್ನು ಕಾಸರಗೋಡು ನಗರಸಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಉದ್ಘಾಟಿಸಿದರು. ವಿವಿಧ ವಿದ್ಯಾಲಯಗಳ ಎನ್‍ಎಸ್‍ಎಸ್, ಸ್ಕೌಟ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳು, ಗುಡ್ ಮೋರ್ನಿಂಗ್ ಕಾಸರಗೋಡು ಸದಸ್ಯರು ಸಹಿತ ನೂರಾರು ಮಂದಿ ರ್ಯಾಲಿಯಲ್ಲಿ ಭಾಗವಹಿಸಿದರು. ನುಳ್ಳಿಪ್ಪಾಡಿಯಿಂದ ಆರಂಭಗೊಂಡ ರ್ಯಾಲಿ ಎಚ್.ಎಸ್. ಮೈದಾನದಲ್ಲಿ ಸಂಪನ್ನಗೊಂಡಿತು.
ರ್ಯಾಲಿಗೆ ಕಾಸರಗೋಡು ಜಿಲ್ಲಾ ಆಹಾರ ಸುರಕ್ಷಾ ಸಹಾಯಕ ಕಮೀಷನರ್, ಆಹಾರ ಸುರಕ್ಷಾ ಅ„ಕಾರಿಗಳಾದ ಹೇಮಾಂಬಿಕಾ ಎಸ್, ಮುಹಮ್ಮದ್ ಅರಾಫತ್ ಎಂ, ಕೆ.ಪಿ.ಮುಸ್ತಫ, ಡೆಪ್ಯೂಟಿ ಮಾಸ್ ಮೀಡಿಯ ಆಫೀಸರ್ ಜಯಪ್ರಕಾಶ್ ಮೊದಲಾದವರು ನೇತೃತ್ವ ನೀಡಿದರು.