ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಕುಣಿತ ಭಜನಾ ತರಬೇತಿಯ ಮಕ್ಕಳಿಗೆ ತಾಳ ಪ್ರದಾನ ಕಾರ್ಯಕ್ರಮವನ್ನು ಮಂದಿರದ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂದಿರದ ಗುರುಸ್ವಾಮಿಗಳು, ಶ್ರೀ ಮಾಹಲಿಂಗೇಶ್ವರ ಕುಣಿತ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.