ಮುಳ್ಳೇರಿಯ: ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದಶನದಲ್ಲಿ ಮುನ್ನಡೆಯುತ್ತಿರುವ ಶ್ರೀ ರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಸಮರಸ ಟ್ರಸ್ಟ್ ಮುಳ್ಳೇರಿಯಾದ ಸಮರಸ ಭೂಮಿಯಲ್ಲಿ ಶ್ರೀ ಗುರುಗಳ ನಿರ್ದೇಶನ-ಮಾರ್ಗದರ್ಶನದಂತೆ ಭೂಶುದ್ಧಿ, 1008 ಸಂಖ್ಯೆಯಲ್ಲಿ ಬಾಲಗಣಪತಿ ಹವನ, 12 ನಾಳಿಕೇರ ಗಣಪತಿ ಹವನ, ಕಲಶ ಪ್ರತಿಷ್ಠಾಪಿಸಿ ಹತ್ತು ಸಾವಿರ ಸಂಖ್ಯೆಯಿಂದ ವನದುರ್ಗಾ ಜಪ ಸಂಪನ್ನವಾಯಿತು.
ಮುಳ್ಳೇರಿಯಾ ಮಂಡಲದ ವೈದಿಕ ಪ್ರಮುಖ ವೇದಮೂರ್ತಿ ವೆಂಕಟೇಶ್ವರ ಭಟ್ ಉಪಸ್ಥಿತರಿದ್ದು, ಸಮಷ್ಠಿಯ ಸಮಾಜದ ಅಗತ್ಯತೆಯ ಹಾಗೂ ಈ ದಿಶೆಯಲ್ಲಿ ನಡೆಸಿದ ಧಾರ್ಮೀಕ ಕರ್ಮಗಳು ನಮಗೆಲ್ಲರಿಗೂ ಅಭಿವೃದ್ಧಿಪ್ರದವಾದ ಮಾರ್ಗವನ್ನನುಗ್ರಹಿಸಲಿ ಎಂದೂ, ಈ ಸಮರಸವು ಅನ್ವರ್ಥವಾಗಿ ಸಮಾಜಕ್ಕೆ ಪ್ರಯೋಜನಪ್ರದವಾಗಲಿ ಎಂದೂ ಹಾರೈಸಿದರು. ರಾತ್ರಿ ವನದುರ್ಗಾ ಪೂಜೆ-ಹವನವು ಮಠದ ಧರ್ಮಖಂಡದ ಸಂಯೋಜಕರಾದ ಕೂಟೇಲು ಕೇಶವ ಪ್ರಸಾದ ಭಟ್ ಅವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲದ ವೈದಿಕ-ಭಕ್ತವೃಂದದ ಸಹಯೋಗದಲ್ಲಿ ಮಂಡಲ, ವಲಯ ಶಾಸನತಂತ್ರದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂಪನ್ನವಾಯಿತು.
ದೇವಿ ಸ್ತೋತ್ರ-ಮಂತ್ರ ಜಪ ಪುರಸ್ಸರ ತರ್ಪಣ ನಡೆಯಿತು. ಮಾತೆಯರು ಕುಂಕುಮಾರ್ಚನೆ, ಶ್ರೀ ಲಕ್ಷ್ಮೀನರಸಿಂಹಕರಾವಲಂಬನ ಸ್ತೋತ್ರ ಪಠನ, ವನದುರ್ಗಾ ಸ್ತೋತ್ರ ಪಠನ ನಡೆಸಿದರು. ಪೂಜಿತ ಕಲಶ ಪೆÇ್ರೀಕ್ಷಣೆ, ಹವನ ಸಂಪಾತ ಸ್ಥಳ ಸ್ಪರ್ಶ ಮಾಡಲಾಯಿತು.