ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ದಿನೀ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಬಾಲ ಕಲಾವಿದರಿಂದ ಬಬ್ರುವಾಹನ ಯಕ್ಷಗಾನ ಬಯಲಾಟ ಪ್ರಬುದ್ಧ ಪ್ರದರ್ಶನ ನಡೆಯಿತು. ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಪ್ರಸಂಗದ ಪ್ರದರ್ಶನ ನಡೆಯಿತು. ಬಬ್ರುವಾಹನನಾಗಿ ನಂದಕಿಶೋರ್, ಕಿಶನ್ ಅಗ್ಗಿತ್ತಾಯ ಸುಬುದ್ಧಿಯಾಗಿ ಶ್ರೀಜ ಉದನೇಶ್, ಚಿತ್ರಾಂಗದೆಯಾಗಿಸುಪ್ರೀತಾ ಸುಧೀರ್, ಸಖಿ ಮತ್ತು ಕೃಷ್ಣನಾಗಿ ವರ್ಷಾ ಲಕ್ಷ್ಮಣ್, ಅರ್ಜುನನಾಗಿ ಅಭಿಜ್ಞಾ ಬೊಳುಂಬು, ಪ್ರದ್ಯುಮ್ನನಾಗಿ ಮನ್ವಿತ್ ಕೃಷ್ಣ, ವೃಷಕೇತುವಾಗಿ ಶರತ್ ಅಮ್ಮಣ್ಣಾಯ, ನೀಲಧ್ವಜನಾಗಿ ಮನೀಶ್ ವಳಮಲೆ, ಸಹ ಕಲಾವಿದರಾಗಿ ಶ್ರೀ ರಾಜ್, ಜಯೇಶ್, ಜಿತೇಶ್ ಮತ್ತು ಮಿಥುನ್ ರಾಜ್ ಪಾತ್ರಗಳಲ್ಲಿ ಪ್ರಬುದ್ಧತೆಮೆರೆದರು. ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಚಕ್ರತಾಳದಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಿಮ್ಮೇಳದಲ್ಲಿ ಸಹಕರಿಸಿದರು.
ಗೋಸಾಡ ಬ್ರಹ್ಮಕಲಶದಲ್ಲಿ ರಂಗಸಿರಿ ಯಕ್ಷಗಾನ ಸಂಭ್ರಮ
0
ಫೆಬ್ರವರಿ 13, 2020