HEALTH TIPS

ಏತಡ್ಕ ಶಾಲಾ ವಾರ್ಷಿಕೋತ್ಸವ


         ಬದಿಯಡ್ಕ: ಏತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಭಾ ಕಾರ್ಯಕ್ರಮ ಹಾಗು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ  ಇತ್ತೀಚೆಗೆ ಜರಗಿತು. ಶಾಲಾ ಪ್ರಬಂಧಕರಾದ ವೈ ಶ್ರೀಧರ್ ಅವರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.
       ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬ್ಡಾಜೆ ಗ್ರಾಮ ಪಂಚಾಯತಿ ಜನಪ್ರತಿನಿಧಿ ಶೈಲಜಾ ನಡುಮನೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಉಪಸ್ಥಿತರಿದ್ದು ಮಾತನಾಡಿ ಯತೀಶ್ ಕುಮಾರ್ ರೈ ಮಾತನಾಡಿ ಶತಮಾನದಷ್ಟು ಹಿಂದೆ ಅಕ್ಷರ ಕಲಿಯಲು ಶಾಲೆಯನ್ನು ನಿರ್ಮಿಸಿದ ಮಹನೀಯರುಗಳನ್ನು ನೆನಪಿಸಿಕೊಂಡು,ಅಕ್ಷರ ಪ್ರಪಂಚದಲ್ಲಿ ಸಾಧನೆಗೈದ ಸಾಧಕರ ಸಾಧನೆ ನಮಗೆ ದಾರಿದೀಪವಾಗಲಿ ಎಂದು ಹಾರೈಸಿದರು.
       ಇನ್ನೋರ್ವ ಮುಖ್ಯ ಅತಿಥಿ  ಕಾಸರಗೋಡಿನ ಚಾಲದ ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ಬೆಜ್ಜಂಗಳ ಅವರು ಮಾತನಾಡಿ ರಕ್ಷಕರು ಮತ್ತು ಅಧ್ಯಾಪಕರು, 'ವಿದ್ಯಾರ್ಥಿ' ಎಂಬ ರಥದ ಎರಡು ಗಾಲಿಗಳು.ಈ ಎರಡು ಗಾಲಿಗಳ ಉತ್ತಮ ನಿರ್ವಹಣೆಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
     ಕುಂಬಳೆ ಉಪಜಿಲ್ಲಾ ಕ್ಷೇತ್ರ ನಿರೂಪಣಾಧಿಕಾರಿ ಶಿವರಾಮ  ಬಿ ಶುಭ ಹಾರೈಸಿ ಮಾತನಾಡಿದರು. ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಹಾಗು ಶಾಶ್ವತ ಬಹುಮಾನ ನಿಧಿಯ ಬಹುಮಾನಗಳನ್ನು ವಿತರಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿಶೋರ್ ರೈ ಕುಂಡಾಪು, ಮಾತೃ ಸಂಘದ ಅಧ್ಯಕ್ಷೆ ಆಶಾ ಓಡಂಗಲ್ಲು,ಎಸ್ ಎಸ್ ಜಿ ಅಧ್ಯಕ್ಷ  ವೈ.ಕೆ ಗಣಪತಿ ಭಟ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಜಿ ಕೃಷ್ಣ ಶರ್ಮ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲ ವಿ  ವರದಿ ವಾಚಿಸಿದರು. ಶಾಲಾ ಪ್ರಬಂಧಕ ವೈ ಶ್ರೀಧರ್ ಸ್ವಾಗತಿಸಿ,ಅಧ್ಯಾಪಕ ಸುಬ್ರಹ್ಮಣ್ಯ ಭಟ್ ಕೆ ವಂದಿಸಿದರು. ಅಧ್ಯಾಪಕ ರಾಜಾರಾಮ ಕೆ ವಿ ಕಾರ್ಯಕ್ರಮ  ನಿರೂಪಿಸಿದರು. ಸಂಜೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದುವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries