ಬದಿಯಡ್ಕ: ಮುಖಾರಿ ಮುವಾರಿ ಸಮುದಾಯದ ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಹಾಗೂ ಸಪರಿವಾರ ದೈವಗಳ ಕ್ಷೇತ್ರದ ಕಳಿಯಾಟ ಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ 10ರಿಂದ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ ನಡೆಯಿತು. ಸಂಜೆ 7.30ಕ್ಕೆ ರಕ್ತಚಾಮುಂಡಿ ದೈವದ ಭಂಡಾರ ತೆಗೆಯುವುದು, ರಾತ್ರಿ 9ಕ್ಕೆ ತೊಡಂಗಲ್, 9.30ಕ್ಕೆ ಬಜ್ಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಸರ್ಪಸಂಬಂಧ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಿತು. ವಿವಿಧಡೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಫೆ.28ರಂದು ಶುಕ್ರವಾರ ಬೆಳಗ್ಗೆ 10ರಿಂದ ರಕ್ತ ಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ, ಸಂಜೆ 3 ಗಂಟೆಯಿಂದ ಗುಳಿಗನ ಕೋಲ, ಪ್ರಸಾದ ವಿತರಣೆ ನಡೆಯಲಿದೆ.