HEALTH TIPS

ಕಾದಂಬರಿ ಸ್ವಪ್ನ ಸಾರಸ್ವತದ ವಿಚಾರ ಸಂಕಿರಣ- ಚರಿತ್ರೆ ಮತ್ತು ವರ್ತಮಾನದ ಮುಖಾಮುಖಿ ಸ್ವಪ್ನ ಸಾರಸ್ವತ-ಪ್ರೊ.ಎಂ.ಎ.ರಹಮಾನ್


            ಕಾಸರಗೋಡು: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ ಖ್ಯಾತ ಕಾದಂಬರಿಕಾರ ಗೋಪಾಲಕೃಷ್ಣ ಪೈ ಅವರ ಕಾದಂಬರಿ ಸ್ವಪ್ನ ಸಾರಸ್ವತದಲ್ಲಿ ಚರಿತ್ರೆ ಮತ್ತು ವರ್ತಮಾನದ ಮುಖಾಮುಖಿಯೊಂದಿಗೆ ಓದುಗನನ್ನು ಹಿಡಿದಿಡುವ ಕೌಶಲ್ಯ ಕಾಣಬಹುದು ಎಂದು ಖ್ಯಾತ ಚಿಂತಕ, ಪರಿಸರ ತಜ್ಞ ಪ್ರೊ.ಎಂ.ಎ.ರಹಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
        ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸಭಾಂಗಣದಲ್ಲಿ ಪುರೋಗಮನ ಕಲಾ ಸಾಹಿತ್ಯ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಗೋಪಾಲಕೃಷ್ಣ ಪೈಗಳ ಸ್ವಪ್ನ ಸಾರಸ್ವತ ಕಾದಂಬರಿಯ ಬಗ್ಗೆ ವಿಚಾರ ಮಂಡಿಸಿ ಮಾತನಾಡಿದರು.
    ನಾಲ್ಕುನೂರು ವರ್ಷಗಳ ಹಿಂದೆ ಗೋವಾದಲ್ಲಿ ಸಂತೃಪ್ತರಾಗಿ ಬದುಕುತ್ತಿದ್ದ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಪೋರ್ಚುಗೀಸರ ಆಕ್ರಮಣದಿಂದ ತಮ್ಮ ನಂಬಿಕೆ, ಜೀವನ ವಿಧಾನ, ಧಾರ್ಮಿಕ, ಸಾಂಸ್ಕøತಿಕ ವಿಧಿವಿಧಾನಗಳನ್ನು ಸಂರಕ್ಷಿಸಿಕೊಳ್ಳಲು ದಕ್ಷಿಣಾಭಿಮುಖವಾಗಿ ವಲಸೆಬರುತ್ತಾರೆ. ದಕ್ಷಿಣದ ಕಾಸರಗೋಡಿನ ಹಲವೆಡೆಗಳಲ್ಲಿ ಅವರು ನೆಲೆನಿಂತು ತಮ್ಮ ಅಸ್ತಿತ್ವವನ್ನು ಸುಭದ್ರಗೊಳಿಸಿ ನಾಡು ನುಡಿಗೆ ಸೇವೆಸಲ್ಲಿಸುತ್ತ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಾರೆ. ವ್ಯಾಪಾರ, ಕೃಷಿ ಮೊದಲಾದವುಗಳಲ್ಲಿ ತೊಡಗಿಸಿಕೊಂಡ ಸಾರಸ್ವತ ಬ್ರಾಹ್ಮಣ ಸಮಾಜದ ವಿಟ್ಟು ಪೈ ಎಂಬವರು ತನ್ನ ಕುಟುಂಬದ ಕಥೆಯನ್ನು ಮೊಮ್ಮಗ ರಾಮಚಂದ್ರ ಪೈಗೆ ಹೇಳುವ ಮೂಲಕ ಪ್ರಾರಂಭವಾಗುವ ಕಾದಂಬರಿ ಈ ಪ್ರದೇಶದ ಪ್ರಾಚೀನ ಚರಿತ್ರೆಯನ್ನು ಕೌಟುಂಬಿಕ ಸಮದರ್ಭಗಳಲ್ಲಿಟ್ಟು ಸುಮಧುರವಾಗಿ ಕಟ್ಟಿಕೊಡುತ್ತದೆ ಎಂದು ಪ್ರೊ.ಎಂ.ಎ.ರಹಮಾನ್ ಕಾದಂಬರಿಯ ಬಗ್ಗೆ ಉಲ್ಲೇಖಿಸಿ ತಿಳಿಸಿದರು.
    ಸ್ವಪ್ನ ಸಾರಸ್ವತದ ಮಲೆಯಾಳಂ ಆವೃತ್ತಿಗೆ ಭಾರೀ ಬೇಡಿಕೆಯಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೇರಳದ ಪ್ರಕಾಶನ ಸಂಸ್ಥೆಗಳಿಗೆ ಮತ್ತು ಪುಸ್ತಕ ಮಾರಾಟ ಮಳಿಗೆಗಳಿಗೆ ಪ್ರತಿಗಳನ್ನು ತಲಪಿಸುವ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ಅನುವಾದಕ ಕೆ.ವಿ.ಕುಮಾರನ್ ಈ ಸಂದರ್ಭ ಹೇಳಿದರು.
   ಸಾಹಿತಿ, ಪ್ರಾಧ್ಯಾಪಕ ಬಾಲಕೃಷ್ಣನ್ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಎ.ವಿ.ಪ್ರಭಾಕರನ್, ಪುಷ್ಪಾಕರನ್ ಬೆಂಡಿಚ್ಚಾಲ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕೆ.ಎಂ.ಬಾಲಕೃಷ್ಣನ್, ಡಾ.ವಿನೋದ್ ಕುಮಾರ್ ಪೆರುಂಬಳ, ಪಿ.ಬಿ.ಜಯರಾಜನ್, ಪ್ರೊ.ನರೇಂದ್ರನಾಥ್, ಬಾಲಚಂದ್ರನ್ ಕೆ., ಅತಿಖಾ ಬೇವಿಂಜೆ, ದಾಮೋದರನ್, ಬಿ.ಕೆ.ಸುಕುಮಾರನ್, ರಾಘವ ಬೆಳ್ಳಿಪ್ಪಾಡಿ, ರವೀಂದ್ರನ್ ಪಾಡಿ, ವಿ.ಆರ್.ಸದಾನಂದನ್, ಕೆ.ಎಸ್.ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು. ಕನ್ನಡದ ಪ್ರಸಿದ್ದ ಕಾದಂಬರಿಗಳನ್ನು ಮಲೆಯಾಳಕ್ಕೆ ತಂದಿರುವ ಕೆ.ವಿ.ಕುಮಾರನ್ ಅವರು ಸ್ವಪ್ನ ಸಾರಸ್ವತ ಕಾದಂಬರಿಯನ್ನು ಮಲೆಯಾಳಕ್ಕೆ ಅನುವಾದ ಮಾಡಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries