ಕಾಸರಗೋಡು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಸಂಭ್ರಮ ಸಡಗರದಿಂದ `ಶ್ರೀ ದೇವಿ ಮಹಾತ್ಮೆ' ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ಜರಗಿತು. ಸಾವಿರಾರು ಮಂದಿ ಯಕ್ಷಗಾನ ಬಯಲಾಟವನ್ನು ವೀಕ್ಷಿಸಿದರು. ಈ ಕಾರ್ಯಕ್ರಮವನ್ನು ಪ್ರಸಾದ್ ಗ್ರೂಪ್ ಆಫ್ ಹೊಟೇಲ್ಸ್‍ನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿತ್ತು.
ಶ್ರೀ ಮೇಳದ ದೇವರನ್ನು ಶಾಂತಾರಾಮ - ಸುಧಾಕರ ರಸ್ತೆಯಲ್ಲಿರುವ `ಈಶಾವಾಸ್ಯಂ' ಗೃಹದಿಂದ ವಾದ್ಯಘೋಷಗಳೊಂದಿಗೆ ಮಠದಪೇಟೆ, ನಾಗರಕಟ್ಟೆಯಾಗಿ ಸಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಆ ಬಳಿಕ ನಡೆದ ಚೌಕಿ ಪೂಜೆಯಲ್ಲಿ ನೂರಾರು ಮಂದಿ ಭಾಗವಹಿಸಿ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು.