ಕುಂಬಳೆ: ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದಲ್ಲಿ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಎಲ್.ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ ತನಕದ ವಿದ್ಯಾರ್ಥಿಗಳು ಅಭಿನಯಗೀತೆ, ನೃತ್ಯ, ತುಳು,ಕನ್ನಡ ನಾಟಕಗಳು, ಪ್ರಹಸನ ಮೊದಲಾದವುಗಳನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗ್ರಂಥಪಾಲಕಿ, ಕವಯಿತ್ರಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಅವರು, ಇಂದಿನ ಮಕ್ಕಳು ಮುಂದಿನ ಜನಾಂಗ. ಪ್ರತಿಭಾವಂತ ಮಕ್ಕಳು ನಾಡಿನ ಮುಂದಿನ ಆಸ್ತಿ. ಸಾಹಿತ್ಯ, ಕಲೆ, ಇತರ ಚಟುವಟಿಕೆಗಳಲ್ಲಿ ಯಾವ ಮಗುವಿಗೆ ಯಾವುದರಲ್ಲಿ ಆಸಕ್ತಿ ಎಂಬುದನ್ನರಿತು ಇಲ್ಲಿಯ ಅಧ್ಯಾಪಕರುಗಳು ತಯಾರುಗೊಳಿಸುವುದು ಮಕ್ಕಳೊಂದಿಗೆ ಅವರೂ ಅಭಿನಂದನಾರ್ಹರು ಎಂದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಶ್ಯಾಂಭಟ್ ದರ್ಬೆಮಾರ್ಗ, ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಉಪಸ್ಥಿತರಿದ್ದರು. ಮಕ್ಕಳಿಂದ ಮಕ್ಕಳೇ ಯೋಜಿಸಿದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಕು. ವೈಶಾಲಿ ಅಧ್ಯಕ್ಷೆ ವಹಿಸಿದ್ದಳು. ಒಂಭತ್ತನೆ ತರಗತಿ ವಿದ್ಯಾರ್ಥಿನಿಯರು ಪ್ರಾರರ್ಥನೆ ಹಾಡಿ, 9ನೇ ತರಗತಿ ಕು.ಸೃಜನಾ ವಂದಿಸಿದರು.