ಉಪ್ಪಳ: ಚಿಪ್ಪಾರು ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯದಲ್ಲಿ ಮಾದಕವಸ್ತು ವಿರೋಧಿ ದಿನಾಚರಣೆಯ ಭಾಗವಾಗಿ "ವಿಮುಕ್ತಿ" ಮತ್ತು "ಆರೋಗ್ಯ ಮಾಹಿತಿ ಶಿಬಿರ" ಭಾನುವಾರ ಜರಗಿತು.
ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ದಾಸಪ್ಪ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾದಕ ವಸ್ತು ಸೇವನೆಯಿಂದ ಆಗುವ ಪರಿಣಾಮದ ಕುರಿತು ಕೃಷ್ಣ ಶೆಟ್ಟಿಗಾರ್ ವಿವರಿಸಿದರು. ಪೂರ್ಣಿಮಾ ಬಲ್ಲಾಳ್ "ವಿಮುಕ್ತಿ" ಪ್ರತಿಜ್ಞೆ ಬೋಧಿಸಿದರು. ಮಿ ಲೈಫ್ ಸ್ಟೈಲ್ ಮಾರ್ಕೆಟಿಂಗ್ ಪ್ರತಿನಿಧಿ ಶ್ರೀಧರ ಮುಜುಂಗಾವು "ಆರೋಗ್ಯಯುಕ್ತ ಸಮಾಜ ಬೋಧನಾ ಶಿಬಿರವನ್ನು ನಡೆಸಿ ಕೊಟ್ಟರು. ಪರೀಕ್ಷಿತ್ ರಾಜ್ ಪೈವಳಿಕೆ, ಗಿರೀಶ ಕುಂಡೇರಿ, ಸುಕುಮಾರ ಕೊಮ್ಮಂಗಳ, ಯೋಗೀಶ್ ಕುಂಡೇರಿ ಸಹಕರಿಸಿದರು. ಗ್ರಂಥಾಲಯ ಅಧ್ಯಕ್ಷ ಜಯಂತ ಚಿಪ್ಪಾರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಖಲೀಲ್ ನಾರ್ಣಕಟ್ಟ ಸ್ವಾಗತಿಸಿ, ಗ್ರಂಥಪಾಲಿಕೆ ಜಯಲಕ್ಷ್ಮಿ ವಂದಿಸಿದರು.