ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2021 ಜ.19ರಿಂದ 24ರ ತನಕ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ಅನ್ನದಾನ ಕಾರ್ಯಕ್ಕಾಗಿ ಜೈವ ಕೃಷಿಯ ಉದ್ಧೇಶದಿಂದ ಬಾಳೆ ಗಿಡಗಳ ವಿತರಣೆಯು ಭಾನುವಾರ ಶ್ರೀ ಕ್ಷೇತ್ರದ ಭಂಡಾರ ಮನೆಯಲ್ಲಿ ನಡೆಯಿತು.
ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ವಿತರಣೆ ಉದ್ಘಾಟನೆ ನೆರವೇರಿಸಿದರು. ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ವಿಪಿನ್‍ದಾಸ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಹುಸೈನ್.ಪಿ.ಪಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೃಷಿ ಸಹಾಯಕ ಅಧಿಕಾರಿ ಸುನಿಲ್ ಕುಮಾರ್, ಕಾರಡ್ಕ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾದೇವಿ, ಜನನಿ.ಎಂ, ಸದಸ್ಯೆ ತಸ್ನಿ ಹಮೀದ್, ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ, ಭಗವತೀ ಕ್ಷೇತ್ರ ಸಮಿತಿ ಅಧ್ಯಕ್ಷ ದಾಮೋದರನ್ ಕಾವುಗೋಳಿ, ಆದೂರು ಹೈಯರ್ ಸೆಕೆಂಡರೀ ಶಾಲೆಯ ಎಸ್‍ಪಿಸಿ ಕೆಡೇಟ್‍ಗಳು, ಮೊದಲಾದವರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅನಿಲ್ ಕುಮಾರ್ ಸ್ವಾಗತಿದರು. ರವೀಂದ್ರ ರೈ ಮಲ್ಲಾವರ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಮಾಸ್ಟರ್ ಕುಂಟಾರು ವಂದಿಸಿದರು. ರಘುನಾಥ ರೈ, ವಿಷ್ಣು ಮಯ್ಯ ನೇತೃತ್ವ ನೀಡಿದರು. ವಿವಿಧ ಪ್ರದೇಶದ ನೂರಾರು ಮಂದಿ ಬಾಳೆಗಿಡವನ್ನು ಪಡೆದುಕೊಂಡರು. ಭಗವತೀ ಕ್ಷೇತ್ರ ಪರಿಸರದಲ್ಲಿ ಬಾಳೆಗಿಡಗಳನ್ನು ನೆಡಲಾಯಿತು.