ಕಾಸರಗೋಡು: ಎಡರಂಗ ಸರ್ಕಾರದ ಈ ವರ್ಷದ ಬಜೆಟ್‍ನಲ್ಲಿ ಸರ್ಕಾರಿ ನೌಕರರನ್ನು ಸಂಪೂರ್ಣವಾಗಿ ಅವಗಣಿಸಿರುವುದನ್ನು ಖಂಡಿಸಿ ಎನ್.ಜಿ.ಓ ಸಂಘ್ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸಿವಿಲ್‍ಸ್ಟೇಶನ್ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ವೇತನ ಪರಿಷ್ಕರಣೆ, ಡಿ.ಎ ಬಾಕಿ, ಪಿಂಚಣಿ ಪ್ರಾಯ ಹೆಚ್ಚಳ, ಸಹಭಾಗಿತ್ವದ ಪಿಂಚಣಿ ವ್ಯವಸ್ಥೆ ಹಿಂಪಡೆಯುವಿಕೆ ಮುಂತಾದ ವಿಚಾರದಲ್ಲಿ ಸರ್ಕಾರಿ ನೌಕರರನ್ನು ಸಂಪೂರ್ಣ ಕಡೆಗಣಿಸಿರುವುದಾಗಿ ಆರೋಪಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಂಘಟನೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ವಿಜಯನ್, ಜಿಲ್ಲಾ ಉಪಾಧ್ಯಕ್ಷ ಕೆ. ರಂಜಿತ್, ಕೆ. ಕರುಣಾಕರ, ರವೀಂದ್ರನ್ ಕೊಟ್ಟೋಡಿ, ಜಯಚಂದ್ರನ್, ಸಂತೋಷ್ ಮುಂತಾದವರು ನೇತೃತ್ವ ನೀಡಿದರು.