ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ರಾಮಣ್ಣ ಮಾಸ್ತರ್ ದೇಲಂಪಾಡಿ ಮತ್ತು ಮನೆಯವರ ವತಿಯಿಂದ ಸೇವಾರೂಪವಾಗಿ `ಮಾಗಧ ವಧೆ-ಅಗ್ರಪೂಜೆ' ಯಕ್ಷಗಾನ ತಾಳಮದ್ದಳೆಯು ಅತ್ಯಂತ ಮನೋಜ್ಞವಾಗಿ ಇತ್ತೀಚೆಗೆ ಮೂಡಿಬಂತು.
ಕಾರ್ಯಕ್ರಮದ ಮೊದಲಿಗೆ ಕ್ಷೇತ್ರ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ಸಮರ್ಪಿಸಲಾಯಿತು ಹಾಗೂ ಶ್ರೀ ಗೋಪಾಲಕೃಷ್ಣ ಭಜನಾ ತಂಡದ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲಾ ಕೇಶವ ಭಟ್ ಅವರ ನೇತೃತ್ವದಲ್ಲಿ ಹಿರಿಯ ಭಾಗವತ ವಿಶ್ವವಿನೋದ ಅವರ ನಿರ್ದೇಶನದಲ್ಲಿ ಮುನ್ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಮಡ್ವ ಶಂಕರನಾರಾಯಣ ಭಟ್, ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಮನೋಳಿತ್ತಾಯ ಎಂಕಣ್ಣಮೂಲೆ ಅವರು ಸಹಕರಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಎಂ.ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ನಾರಾಯಣ ಪಾಟಾಳಿ ಮಯ್ಯಾಳ, ವಿಷ್ಣುಶರಣ ಬನಾರಿ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ, ಡಿ.ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ರಾಮಯ್ಯ ರೈ ಕಲ್ಲಡ್ಕ ಗುತ್ತು, ನಾರಾಯಣ ಮಾಸ್ತರ್ ದೇಲಂಪಾಡಿ, ಎಂ.ರಮಾನಂದ ರೈ ದೇಲಂಪಾಡಿ, ವಿದ್ಯಾಭೂಷಣ ಪಂಜಾಜೆ, ರಾಮಣ್ಣ ಮಾಸ್ತರ್ ದೇಲಂಪಾಡಿ, ಬಿ.ಎಚ್ ವೆಂಕಪ್ಪ ಗೌಡ, ರಾಮ ನಾಯ್ಕ ದೇಲಂಪಾಡಿ ಪಾತ್ರಗಳನ್ನು ನಿರ್ವಹಿಸಿದರು. ನಂದಕಿಶೋರ ಬನಾರಿ ಸ್ವಾಗತಿಸಿ, ದಿವ್ಯಾನಂದ ಪೆಂದರ್ಲಪದವು ವಂದಿಸಿದರು.