HEALTH TIPS

ಜನಗಣತಿ ವೇಳೆ ಆತಂಕಬೇಡ: ಸಹಾಯಕ ನಿರ್ದೇಶಕ ಶೈಲೇಂದ್ರ ಅಕ್ಕಾಯಿ

   
          ಕಾಸರಗೋಡು: ಜನಗಣತಿ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರು ಯಾವುದೇ ರೀತಿ ಆತಂಕಪಡಬೇಕಿಲ್ಲ. ಈ ಮೂಲಕ ಸಂಗ್ರಹಿಸಲಾಗುವ ವ್ಯಕ್ತಿಗತ ಮಾಹಿತಿಗಳು ಬಹಿರಂಗಗೊಳ್ಳದು ಎಂದು ಜನಗಣತಿ ಸಹಾಯಕ ನಿರ್ದೇಶಕ ಶೈಲೇಂದ್ರ ಅಕ್ಕಾಯಿ ತಿಳಿಸಿದರು.
         ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ನಡೆದ ಜನಗಣತಿ ಸಂಬಂಧ ತರಬೇತಿಯಲ್ಲಿ ಶುಕ್ರವಾರ ಭಾಗವಹಿಸಿದ ಅವರು ಮಾತನಾಡಿದರು.
         ಜನಗಣತಿಯ ಇತಿಹಾಸದಲ್ಲೇ ಪ್ರಥಮಬಾರಿಗೆ ಮೊಬೈಲ್ ಆಪ್ ಮೂಲಕ ಗಣತಿ ನಡೆಸಲಾಗುತ್ತಿದೆ. ಗಣನತಿ ಬಗ್ಗೆ ನಿಗಾ ಇರಿಸಲು ವೆಬ್ ಪೆÇೀರ್ಟಲ್ ಇರುವುದು. ಈ ಮೂಲಕ ದೇಶದ ಚರಿತ್ರೆಯಲ್ಲಿ "ಡಿಜಿಟಲ್ ಜನಗಣಣತಿ" ಎಂದು ಈ ಗಣಣತಿಯನ್ನು ಕರೆಯಲಾಗುತ್ತಿದೆ. ಜನಗಣಣತಿ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕ್ರಮವನ್ನೂ ನಡೆಸಲಾಗುವುದು. ಎರಡು ಹಂತಗಳಲ್ಲಿ ದೇಶದಲ್ಲಿ ಜನಗಣಣತಿ ನಡೆಯಲಿದೆ. ಮೊದಲ ಹಂತ ಮೇ ಒಂದರಂದು ಆರಂಭಗೊಂಡು 30ರಂದು ಪೂರ್ಣಗೊಳ್ಳಳಿದೆ. ಮನೆ ಪಟ್ಟಿ ಸಿದ್ಧಪಡಿಸುವುದು, ಮನೆಗಳ ಗಣನೆ ಇತ್ಯಾದಿ ಮೊದಲ ಹಂತದಲ್ಲಿ ಪೂರ್ಣಗೊಳ್ಳಲಿದೆ. ಕುಟುಂಬಗಳ ಆರ್ಥಿಕ, ಸಾಮಾಜಿಕ ಗುಣಮಟ್ಟ ಅಳೆಯುವ 31 ಪ್ರಶ್ನೆಗಳು ಮಾತ್ರ ಮೊದಲ ಜನಗಣಣತಿಯಲ್ಲಿರುವುದು. ಈ ಪ್ರಶ್ನೆಗಳು ಗಝೆಟ್ ನಲ್ಲಿ ಪ್ರಕಟಿಸಲಾಗಿದೆ. ಎರಡನೇ ಹಂತದಲ್ಲಿ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುವುದು. 2021 ಫೆ.9ರಿಂದ 28 ವರೆಗೆ ದ್ವಿತೀಯ
ಹಂತದ ಜನಗಣನತಿ ನಡೆಯಲಿದೆ. ಮಾ.1ರಿಂದ 5 ವರೆಗೆ ರಿವಿಝನಲ್ ರೌಂಡ್ ನಡೆಯಲಿದೆ. 2021 ಡಿ.31ರ ಮುಂಚಿತವಾಗಿ ಜನಗಣನತಿ ವರದಿ ಪ್ರಕಟಿಸುವ ಉದ್ದೇಶದೊಂದಿಗೆ ಇಂದಿನ ಕ್ರಮಗಳು ನಡೆಯುತ್ತಿವೆ. 2021 ಮಾ.1ರಂದು ಜನಸಂಖ್ಯೆ ಗಣನೆ ಮಾಡಲಾಗುವುದು ಎಂದರು.
     ಜನಗಣನತಿಯಲ್ಲಿ ಮೊಬೈಲ್ ಬಳಕೆ ಕಷ್ಟವಾಗುವ ಮಮದಿಗಾಗಿ ಹಳೆಯ ಮಾದರಿಯಲ್ಲಿ ಕಾಗದದಲ್ಲಿ ಬರೆದು ಸಂಗ್ರಹಿಸುವ ಸೌಲಭ್ಯವೂ ಇರುವುದು. ಆದರೂ ಗರಿಷ್ಠ ಮಟ್ಟದಲ್ಲಿ ಮೊಬೈಲ್ ನಲ್ಲೇ ಮಾಹಿತಿ ಸಂಗ್ರಹಿಸುವಂತೆ ಎನ್ಯುಮರೇಟರ್ ಗಳಿಗೆ ಆದೇಶ ನೀಡಲಾಗಿದೆ. ಇದಲ್ಲದೆ ಒ.ಟಿ.ಪಿ.ಮೂಲಕ ಜನತೆಗೆ ನೇರವಾಗಿ ಮಾಹಿತಿ ಅಪ್ ಲೋಡ್ ನಡೆಸುವ ರೀತಿಯೂಪರಿಶೀಲನೆಯಲ್ಲಿದೆ. 650 ರಿಂದ 800 ವರೆಗಿನ ಕುಟುಂಬಗಳು ಎಂಬ ರೀತಿ ಪ್ರತಿ ಎನ್ಯುಮರೇಟರ್ ಗಳಿಗೆ ರೇಷನ್ ಬ್ಲೋಕ್ ನಿಗದಿಡಿಸಲಾಗಿದೆ. ಮಾಹಿತಿ ಸಂಗ್ರಹ ನಿಖರವಾಗಿ ನಡೆಸಿದ ಎನ್ಯುಮರೇಟರ್ ಗಳಿಗೆ ಮೊಬಲಗು ಅಕೌಂಟ್ ಗಳಿಗೆ ತಲಪಲಿದೆ ಎಂದು ಸಹಾಯಕ ನಿರ್ದೇಶಕ ತಿಳಿಸಿದರು.
      ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ವಲಯ ಕಂದಾಯಾಧಿಕಾರಿ ಕೆ.ರವಿಕುಮಾರ್, ಜಿಲ್ಲಾ ಮಟ್ಟದ ಸಿಬ್ಬಂದಿ, ತಹಸೀಲ್ದಾರರು, ಜನಗಣಣತಿ ಗುಮಾಸ್ತರು ಮೊದಲಾದವರು ಉಪಸ್ಥಿತರಿದ್ದರು. ವಿನೋದ್ ಕೆ.ವಿ., ಅಂಬಿಳಿ ಕೆ.ಎಸ್. ಸಂಚಾಲಕರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries